Sat, 23 Apr 2022 12:47:45Office Staff
ದ್ವಿತೀಯ ಪಿಯು 2021-22ನೇ ಸಾಲಿನ ತರ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಪರೀಕ್ಷೆಗಳು ರಾಜ್ಯದ ಒಟ್ಟು 1,076 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ನಡೆದಿದ್ದು, ಎರಡು ವಿಷಯಗಳಲ್ಲಿ ನೋಂದಣಿಯಾದ 2,28,073 ವಿದ್ಯಾರ್ಥಿಗಳ ಪೈಕಿ 11,379 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು.
View more
Sat, 23 Apr 2022 06:36:28Office Staff
ಜಹಾಂಗೀರ್ಪುರಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಯಥಾಸ್ಥಿತಿ ಯನ್ನು ಕಾಯ್ದುಕೊಳ್ಳುವಂತೆ ತನ್ನ ನಿರ್ದೇಶವನು ಗುರುವಾರ ಮುಂದಿನ ಆದೇಶದವರೆಗೆ ವಿಸ್ತರಿಸಿದ ಸರ್ವೋಚ್ಚ ನ್ಯಾಯಾಲಯವು, ಅಂಗಡಿಗಳು, ಕುರ್ಚಿಗಳು, ಟೇಬಲ್;ಗಳು ಮತ್ತು ಪೆಟ್ಟಿಗೆಗಳನ್ನು ತೆರವು ಗೊಳಿಸಲು ನಿಮಗೆ ಬುಲ್ಲೋಜರ್ ಅಗತ್ಯವಿದೆಯೇ ಎಂದು ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎನ್ ಡಿಎಂಸಿ)ಯನ್ನು ಪ್ರಶ್ನಿಸಿತು.
View more
Sat, 23 Apr 2022 03:31:28Office Staff
ಯಲ್ಲಾಪುರ : ತಾಲೂಕಿನ ಅರೆಬೈಲ್ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ.
ಅಪಘಾತದ ಪರಿಣಾಮವಾಗಿ 20 ಸಾವಿರ ಲೀಟರ್ ಹಾಲು ಹೊಳೆಯಂತೆ ಹರಿದು ಹೋಗಿದೆ. ಮಗುಚಿ ಬಿದ್ದ ಟ್ಯಾಂಕರನಿಂದ ಸೋರುತ್ತಿರುವ ಹಾಲನ್ನ ತುಂಬಿಕೊಳ್ಳಲು ಜನರು ಬಾಟಲಿ, ಕ್ಯಾನ್ ಹಿಡಿದು ನಾಮುಂದು ತಾಮುಂದು ಮುಗಿಬಿದ್ದರು.
View more
Sat, 23 Apr 2022 01:52:08Office Staff
ಕಾರವಾರ : ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವವರ ಮೇಲೆ ರಾಜೀಯಾಗುವ ಪ್ರಶ್ನೆಯೇ ಇಲ್ಲ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
View more
Fri, 22 Apr 2022 23:53:39Office Staff
ಜಿಲ್ಲೆಯಲ್ಲಿ ಪ್ರಸಕ್ತ 8 ಮಂಗನ ಪ್ರಕರಣಗಳು ಕಂಡು ಬಂದಿದ್ದು, ಮಂಗನ ಕಾಯಿಲೆಯಿಂದ ಸಿದ್ದಾಪುರದ ಜಾನಕಿ ಹೆಗಡೆ (85) ಎಂಬುವವರು ಬುಧವಾರ ಚಿಕಿತ್ಸೆ ಫಲಿಸದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ವರ್ಷ ಮಂಗನ ಕಾಯಿಲೆಗೆ ಬಲಿಯಾದ ಪ್ರಥಮ ಪ್ರಕರಣ ಇದಾಗಿದೆ.
View more
Fri, 22 Apr 2022 23:25:47Office Staff
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿಯ ಸಹಯೋಗದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನ, 2022-23 ಸಾಲಿನ ಬೇಸಿಗೆ ಶಿಬಿರವನ್ನು ಏ. 30ರಿಂದ ಮೇ 9 ಪ್ರತಿ ದಿನ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ವರೆಗೆ ನಡೆಸಲಾಗುತ್ತದೆ.
View more
Fri, 22 Apr 2022 14:09:45Office Staff
ನಾಮಧಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಬಗ್ಗೆ ಫೇಕ್ ಐಡಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹರಿಬಿಡುತ್ತಿರುವವರು ಹಾಗೂ ಕಮೆಂಟ್;ಗಳನ್ನು ಹಾಕುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಸಮಿತಿ ವತಿಯಿಂದ ಡಿವೈಎಸ್;ಪಿಗೆ ದೂರು ಸಲ್ಲಿಸಲಾಗಿದೆ.
View more
Thu, 21 Apr 2022 16:53:36Office Staff
ಕಳೆದವಾರ ಕೋಮು ಘರ್ಷಣೆಗಳಿಗೆ ಸಾಕ್ಷಿಯಾಗಿದ್ದ ದಿಲ್ಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರು ಬುಧವಾರ ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿದರು. ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿಯವರು ದ್ವೇಷದ ಬುಲ್ಡೋಜರ್ ಗಳನ್ನು ಸ್ಥಗಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದರೆ
View more