ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿನ‌ ಟ್ಯಾಂಕರ್ ಪಲ್ಟಿ.

ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿನ‌ ಟ್ಯಾಂಕರ್ ಪಲ್ಟಿ.

Sat, 23 Apr 2022 03:31:28  Office Staff   SO News

ಯಲ್ಲಾಪುರ : ತಾಲೂಕಿನ ಅರೆಬೈಲ್ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ  ಹಾಲಿನ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ.

ಅಪಘಾತದ ಪರಿಣಾಮವಾಗಿ 20 ಸಾವಿರ ಲೀಟರ್ ಹಾಲು ಹೊಳೆಯಂತೆ ಹರಿದು ಹೋಗಿದೆ. ಮಗುಚಿ ಬಿದ್ದ ಟ್ಯಾಂಕರನಿಂದ ಸೋರುತ್ತಿರುವ ಹಾಲನ್ನ ತುಂಬಿಕೊಳ್ಳಲು ಜನರು ಬಾಟಲಿ, ಕ್ಯಾನ್ ಹಿಡಿದು  ನಾಮುಂದು ತಾಮುಂದು ಮುಗಿಬಿದ್ದರು.

 ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳ ಕಡೆ ಈ ಹಾಲಿನ  ಟ್ಯಾಂಕರ್ ತೆರಳುತಿತ್ರು. ಅರೆಬೈಲ್ ಬಳಿ‌ ವಾಹನದ ಬ್ರೇಕ್ ತಾಗದೇ ಇರೋದ್ರಿಂದ ‌ಟ್ಯಾಂಕರ್  ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Share: