Mon, 06 Mar 2023 05:20:28Office Staff
ಇಲ್ಲಿಯ ಖಾಸಗಿ ಬ್ಯಾಂಕೊಂದರ ಕನಿಷ್ಠ 40 ಗ್ರಾಹಕರು ತಮ್ಮ ಕೆವೈಸಿ ಮತ್ತು ಪಾನ್ ವಿವರಗಳನ್ನು ನವೀಕರಿಸುವಂತೆ ನಕಲಿ ಎಸ್ಎಂಎಸ್ ಗಳಲ್ಲಿಯ ಲಿಂಕ್ವೊಂದನ್ನು ಕ್ಲಿಕ್ಕಿಸಿದ ಬಳಿಕ ಮೂರೇ 234 ದಿನಗಳಲ್ಲಿ ತಮ್ಮ ಖಾತೆಗಳಲ್ಲಿಯ ಲಕ್ಷಾಂತರ ರೂ. ಗಳನ್ನು ಕಳೆದುಕೊಂಡಿದ್ದಾರೆ.
View more
Mon, 06 Mar 2023 03:21:30Office Staff
ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ 09 ರಿಂದ 29 ರ ವರೆಗೆ ನಡೆಯಲಿದ್ದು, ವಾಕರಸಾ ಸಂಸ್ಥೆಯು ಧಾರವಾಡ, ಕಾರವಾರ, ಬಾಗಲಕೋಟೆ, ಹಾವೇರಿ ಬೆಳಗಾವಿ ಮತ್ತು ಗದಗ ಭಾಗಗಳಲ್ಲಿ ಪರೀಕ್ಷೆಗಳಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಸಲಾಗಿದೆ.
View more
Mon, 06 Mar 2023 00:42:39Office Staff
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ,ಕಿತ್ತೂರ ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಅಟಲ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಏಕಲವ್ಯ ಮಾದರಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಮಾರ್ಚ್ 12 ರಂದು ಪರೀಕ್ಷೆಗಳು ನಡೆಯಲಿವೆ.
View more
Sun, 05 Mar 2023 19:02:40Office Staff
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲ೦ಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈ ಸಂಬಂಧ ಶಾಸಕನನ್ನು ಬಂಧಿಸುವುದರ ಜೊತೆಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.
View more
Sun, 05 Mar 2023 05:12:29Office Staff
ಆಸಕ್ತ ಮಹಿಳೆಯರು ಆಯಾ ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳನ್ನು ಸಂಪರ್ಕಿಸಿ ಕ್ರೀಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಮಾರ್ಚ್ 06 ರ ಸಂಜೆ 5.30 ರೊಳಗಾಗಿ ತಮ್ಮ ಹೆಸರಗಳನ್ನು ನೋಂದಾಯಿಸಿಕೊಳ್ಳಬಹುದು.
View more
Sun, 05 Mar 2023 04:54:47Office Staff
ಸಿಸಿಬಿ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ ಹುಬ್ಬಳ್ಳಿಯ ಭವಾನಿನಗರದ ಉದ್ಯಮಿ ರಮೇಶ ಬೋನಗೇರಿ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 500 ರೂ.ಮುಖಬೆಲೆಯ 3 ಕೋಟಿ ರೂ. ನಗದನ್ನು ಪತ್ತೆ ಹಚ್ಚಿದ್ದು, ಹಣದ ಮೂಲದ ಬಗ್ಗೆ ವಿಚಾರಣೆ ಕೈಗೊಂಡಿದೆ.
View more
Sun, 05 Mar 2023 00:10:29Office Staff
2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ-ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಲು ಮತ್ತು ಈ ಹಕ್ಕೊತ್ತಾಯಗಳೇ ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಮೂಡಿಸಲು ಎಸ್.ಐ.ಓ ಕರ್ನಾಟಕವು ಶಿಕ್ಷಣದ ಮೂಲಭಾಗಿದಾರರೊಂದಿಗೆ ಸಮಾಲೋಚಿಸಿ “ವಿದ್ಯಾರ್ಥಿ ಪ್ರಣಾಳಿಕೆ”ಯನ್ನು ತಯಾರುಗೊಳಿಸಿದ್ದು, ಪಕ್ಷಗಳು ಈ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಬದ್ಧತೆಯನ್ನು ಖಚಿತಪಡಿಸಬೇಕು ಎಂದು ಎಸ್.ಐ.ಓ ಕರ್ನಾ
View more
Fri, 03 Mar 2023 16:33:44Office Staff
ಬಿಜೆಪಿಯ ತಲಾ ನಾಲ್ಕು ಮಂದಿ ಸಚಿವರು ಮತ್ತು ಶಾಸಕರು ಆ ಪಕ್ಷವನ್ನು ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಎಂ. ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ
View more
Fri, 03 Mar 2023 15:28:56Office Staff
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತ (ಇಸಿ) ರ ನೇಮಕಾತಿಗಳ ಕುರಿತು ಪ್ರಧಾನಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರನ್ನು ಒಳಗೊಂಡ ಸಮಿತಿಯು ರಾಷ್ಟ್ರಪತಿಗಳಿಗೆ ಸಲಹೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಮಹತ್ವದ ತೀರ್ಪೊಂದರಲ್ಲಿ ನಿರ್ದೇಶನ ನೀಡಿದೆ
View more