ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹುಬ್ಬಳ್ಳಿಯ ಉದ್ಯಮಿಯೋರ್ವರ ಮನೆಯಿಂದ ೩ಕೋಟಿ ಅಕ್ರಮ ಹಣ ವಶಪಡಿಸಿಕೊಂಡ ಸಿಸಿಬಿ ಪೊಲೀಸರು

ಹುಬ್ಬಳ್ಳಿಯ ಉದ್ಯಮಿಯೋರ್ವರ ಮನೆಯಿಂದ ೩ಕೋಟಿ ಅಕ್ರಮ ಹಣ ವಶಪಡಿಸಿಕೊಂಡ ಸಿಸಿಬಿ ಪೊಲೀಸರು

Sun, 05 Mar 2023 04:54:47  Office Staff   SOnews

ಹುಬ್ಬಳ್ಳಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್  ನಿವಾಸದಲ್ಲಿ 8 ಕೋಟಿ ರೂ. ಪತ್ತೆಯಾದ ಬೆನ್ನಲ್ಲೆ ಹುಬ್ಬಳ್ಳಿಯ ಉದ್ಯಮಿಯೊಬ್ಬರ ನಿವಾಸದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ರೂ.ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ ಹುಬ್ಬಳ್ಳಿಯ ಭವಾನಿನಗರದ ಉದ್ಯಮಿ ರಮೇಶ ಬೋನಗೇರಿ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 500 ರೂ.ಮುಖಬೆಲೆಯ 3 ಕೋಟಿ ರೂ. ನಗದನ್ನು ಪತ್ತೆ ಹಚ್ಚಿದ್ದು, ಹಣದ ಮೂಲದ ಬಗ್ಗೆ ವಿಚಾರಣೆ ಕೈಗೊಂಡಿದೆ.

ಮನೆ ಮಾಲಕರಿಗೆ ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದೆ. ಈ ಪ್ರಕರಣ ಸಂಬಂಧ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ಮೂಲ ಏನು ಮತ್ತು ದೊಡ್ಡಮೊತ್ತದ ಹಣ ಸಂಗ್ರಹಿಸಿಡಲಾಗಿದ್ದ ಉದ್ದೇಶವೇನು ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದೆ.


Share: