Tue, 21 May 2024 02:24:09Office Staff
ಅಕ್ರಮ ಕಲ್ಲಿನಕೋರೆ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ವೇಳೆ ಠಾಣೆಗೆ ಬಂದು ಪೊಲೀಸರಿಗೆ ಬೆದರಿಕೆ ಹಾಕಿ ಅವಾಚ್ಯವಾಗಿ ನಿಂದಿಸಿ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
View more
Mon, 20 May 2024 20:30:08Office Staff
ಹೊಸದಿಲ್ಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಮತ್ತು ಅವರ ವಿದೇಶ ಸಚಿವ ಹುಸೇನ್ ಅಮೀರ ಅಬ್ದೊಲ್ಲಾಹಿಯಾನ್ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾಗಿ ವರದಿಯಾಗಿದೆ.
View more
Mon, 20 May 2024 16:04:59Office Staff
ಪ್ರವಾಸಿಗರನ್ನ ಹೊತ್ತೋಯ್ದ ಟೂರಿಸ್ಟ್ ಬೋಟ್ ಮುಳುಗಿದ ತದಡಿ ಸಮೀಪದ ಮುಡಂಗಿ ಬಳಿ ರವಿವಾರ ಸಂಜೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ.
View more
Sun, 19 May 2024 23:41:48Office Staff
ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ವಿಕಲಚೇತನ ಮಗಳು ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮೂಡು ಗೋಪಾಡಿಯ ದಾಸನಹಾಡಿ ಎಂಬಲ್ಲಿ ನಡೆದಿದೆ.
View more
Sun, 19 May 2024 23:10:06Office Staff
ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲ್ಲಮಾ ಇಕ್ಬಾಲ್ ಪ್ರಾಥಮಿಕ ಶಾಲೆ ಬಳಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಬೃಹತ್ ಮರವು ರಸ್ತೆಗೆ ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಪ.ಪಂ. ಸದಸ್ಯರಾದ ತೌಫೀಖ್ ಬ್ಯಾರಿ, ವಸೀಮ್ ಮನೆಗಾರ್ ಎಸ್.ಡಿ.ಪಿಐ ಭಟ್ಕಳ ಅಸೆಂಬ್ಲಿ ಅಧರ್ಧಕ್ಷ ಮಕ್ಬೂಲ್ ಶೇಕ್ ಮತ್ತು ಇರ್ಫಾನ್ ಎಂಬುವವರು ಸ್ಥಳಕ್ಕೆ ತಲುಪಿ ಮರವನ್ನು ತೆರವುಗೊಳಿಸಿದರು.
View more
Sun, 19 May 2024 22:45:32Office Staff
ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ಅಳವಡಿಸಲಾಗಿದೆ ಎಂದ ಸೈಯದ್ ಅಲಿ, ಶೀಘ್ರದಲ್ಲೇ ಇತರ ಸ್ಥಳಗಳಲ್ಲಿ ಹೆಚ್ಚಿನ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು. ಈ ಕ್ಯಾಮೆರಾಗಳು ಪ್ರದೇಶಗಳ ಸಂಪೂರ್ಣ ಮೇಲ್ವಿಚಾರಣೆಯನ್ನು ನಡೆಸುತ್ತವೆ ಮತ್ತು ಇಲ್ಲಿ ತ್ಯಾಜ್ಯ ಎಸೆಯುವವರನ್ನು ಗುರುತಿಸುತ್ತದೆ
View more
Sun, 19 May 2024 04:22:35Office Staff
ಕಾರವಾರ : ಮೇ 18ರಿಂದ 22 ರ ವರೆಗೆ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
View more