Thu, 30 May 2024 07:18:57Office Staff
ಕರ್ನಾಟಕ ವಿಶ್ವವಿದ್ಯಾಲಯದ ಅಡಿ ಬರುವ ಕಾಲೇಜುಗಳ ಏಕವಲಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ದಿನಾಂಕ 30.05.2024, ಗುರುವಾರದಂದು ಆಯೋಜಿಸಲಾಗಿದೆ.
View more
Thu, 30 May 2024 06:59:26Office Staff
ರಾಜ್ಯಾದ್ಯಂತ ರಾಷ್ಟೀಯ ಲೋಕ ಅದಾಲತ್ ಜುಲೈ 13 ರಂದು ಹಮ್ಮಿಕೊಳ್ಳಲಾಗಿದೆ. ಈ ಲೋಕ ಅದಾಲತ್ ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
View more
Thu, 30 May 2024 06:49:21Office Staff
ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವ ಪರಿಸರ ದಿನಾಚರಣೆ 2024 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಕಾರವಾರ, ಸಂಗಮ ಸೇವಾ ಸಂಸ್ಥೆ (ರಿ) ಬಾಳೇಗುಳಿ, ಹಾಗೂ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ, ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
View more
Thu, 30 May 2024 06:44:06Office Staff
ಮೇ ತಿಂಗಳ ಅಂತ್ಯದೊಳಗಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲ ಕುಡಿಯುವ ನೀರಿನ ಮೇಲ್ತೊಟ್ಟಿಗಳನ್ನು ಕಡ್ಡಾಯವಾಗಿ ಶುಚಿಗೊಳಿಸಿ, ಜಿಯೋ ಟ್ಯಾಗ್ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಎಂ ಸೂಚನೆ ನೀಡಿದರು.
View more
Thu, 30 May 2024 04:19:56Office Staff
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮಾರ್ಚ್ ತಿಂಗಳಲ್ಲಿ ನಡೆಸಿದ ಪಿಜಿ-ಎಂಬಿಎ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಮತ್ತು ಮ್ಯಾನೇಜ್ಮೆಂಟ್ (ಎಐಟಿಎಂ) ಕಾಲೇಜಿಗೆ ಶೇ.೧೦೦ ಫಲಿತಾಂಶ ಲಭಿಸಿದೆ
View more
Thu, 30 May 2024 02:22:18Office Staff
ಮೀನುಗಾರಿಕೆಗೆ ತೆರಳಿದಾಗ, ಬಲೆ ಬೀಸುವ ಸಂದರ್ಭದಲ್ಲಿ ಹಗ್ಗ ಕುತ್ತಿಗೆಗೆ ಸಿಕ್ಕಿಕೊಂಡು ಮೀನುಗಾರ ಮೃತರಾದ ಘಟನೆ ಬುಧವಾರ ನಡೆದಿದೆ.
View more
Wed, 29 May 2024 07:51:34Office Staff
ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ಅಪ್ಪಳಿಸಿದ್ದು, ಪ್ರವಾಸಿ ತಾಣ ತತ್ತರಿಸಿ ಹೋಗಿದೆ.
View more
Wed, 29 May 2024 07:33:50Office Staff
ಜಿಲ್ಲೆಯ ರೈತರ ಖಾತೆಗಳಿಗೆ ಜಮಾವಣೆಯಾಗಿರುವ ಬೆಳೆ ಪರಿಹಾರದ ಮೊತ್ತವನ್ನು, ಯಾವುದೇ ಕಾರಣಕ್ಕೂ ರೈತರು ಬ್ಯಾಂಕ್ಗಳಿAದ ಪಡೆದ ಇತರೆ ಸಾಲದ ಮೊತ್ತಕ್ಕೆ ಸರಿಹೊಂದಿಸಿಕೊಳ್ಳದAತೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ ಸೂಚನೆ ನೀಡಿದರು.
View more
Wed, 29 May 2024 07:23:00Office Staff
ಯಾಂತ್ರೀಕೃತ ಮೀನುಗಾರಿಕೆ ದೋಣಿಯನ್ನು ಬಳಸಿ ಕರ್ನಾಟಕ ಕರಾವಳಿಯಲ್ಲಿ ಪ್ರತಿ ವರ್ಷ ಜೂನ್ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ಮೀನು ಹಿಡಿಯುವುದನ್ನು ನಿಷೇಧಿಸಿರುವ ಹಿನ್ನಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಮೀನುಗಾರಿಕಾ ಯಾಂತ್ರೀಕೃತ ದೋಣಿಗಳು ಜೂನ್ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ.
View more