Sun, 29 May 2022 16:14:18Office Staff
ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯನ್ನು ಅವಹೇಳನ ಮಾಡಿರುವ ಆರೋಪ ಹೊತ್ತಿರುವ ರೋಹಿತ್ ಚಕ್ರತೀರ್ಥನನ್ನು ಈ ಕೂಡಲೇ ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ
View more
Sun, 29 May 2022 15:58:40Office Staff
ತಾನು ಹಾಗೂ ತನ್ನ ಸರಕಾರ ಕಳೆದ 8 ವರ್ಷಗಳಲ್ಲಿ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
View more
Sat, 28 May 2022 21:59:43Office Staff
ಮಾದಕದ್ರವ್ಯಗಳ ನಿಯಂತ್ರಣ ಘಟಕ(ಎನ್. ಸಿ.ಬಿ)ವು ಕಳೆದ ವರ್ಷದ ಅ.2ರಂದು ಮುಂಬೈ ಕರಾವಳಿ ಯಾಚೆ ಕೊರ್ಡೆಲಿಯಾ ಐಷಾರಾಮಿ ಹಡಗಿನ ಮೇಲೆ ನಡೆಸಿದ್ದ ದಾಳಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಐವರನ್ನು ಶುಕ್ರವಾರ ಆರೋಪಮುಕ್ತಗೊಳಿಸಿದ್ದು, ಇತರ 14 ಆರೋಪಿ ಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
View more
Sat, 28 May 2022 21:51:46Office Staff
ಭಾರತೀಯ ಸೇನಾ ವಾಹನವೊಂದು ರಸ್ತೆಯಿಂದ ಜಾರಿ ಲದಾಖನ ಶ್ಲೋಕ ನದಿಗುರುಳಿದ ಪರಿಣಾಮ ಕನಿಷ್ಠ 9 ಯೋಧರು ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿದ್ದಾರೆ
View more
Sat, 28 May 2022 21:37:11Office Staff
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ನ ಏಳು ಸ್ಥಾನಗಳಿಗೆ ಜೂ.3ರಂದು ನಿಗದಿಯಾಗಿದ್ದ ಚುನಾವಣೆಗೆ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಶುಕ್ರವಾರ ಘೋಷಿಸಿದರು.
View more
Sat, 28 May 2022 15:24:29Office Staff
ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳಿಕೊಳ್ಳುತ್ತಿರುವವರು ಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜನರ ಮುಂದಿಡಲಿ. ಅದರಲ್ಲಿ ದಲಿತ, ಹಿಂದೂಳಿದ ವರ್ಗಗಳ,ಅಲ್ಪಸಂಖ್ಯಾತರ, ಆದಿವಾಸಿಗಳ, ಮಹಿಳೆಯರ ಸ್ಥಾನಮಾನಗಳೇನಾಗಿರುವುದು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ. ಖಾಸೀಂ ರಸೂಲ್ ಇಲಿಯಾಸ್ ಹೇಳಿದರು
View more
Fri, 27 May 2022 18:32:23Office Staff
ಬಿಡ್ದಾರರ ಕೊರತೆಯಿಂದಾಗಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ (ಬಿಪಿಸಿಎಲ್) ತಾನು ಹೊಂದಿರುವ ಸಂಪೂರ್ಣ ಶೇ. 52.92ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪೆನಿಯನ್ನು ಖಾಸಗೀಕರಣಗೊಳಿಸುವ ತನ್ನ ಪ್ರಸ್ತಾವವನ್ನು ಕೇಂದ್ರ ಸರಕಾರ ಗುರುವಾರ ಹಿಂತೆಗೆದುಕೊಂಡಿದೆ
View more
Fri, 27 May 2022 18:12:56Office Staff
ದಲಿತ ಮಹಿಳೆಯ ವಿವಾಹ ಮೆರವಣಿಗೆ ಮೇಲೆ ಮೇಲ್ವಾತಿ (ಠಾಕೂರ್)ಯ ಹಲವರು ದಾಳಿ ನಡೆಸಿದ ಘಟನೆ ಗುಜರಾತ್ ನ ಅಹದಾಬಾದ್ ನ ದಂಗಾರ್ವ ಗ್ರಾಮದಲ್ಲಿ ಗುರುವಾರ ನಡೆದಿದೆ. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ.
View more
Fri, 27 May 2022 17:17:53Office Staff
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ಹೊರಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಇನ್ನಿತರರ ವಿರುದ್ಧ ತನಿಖಾಧಿಕಾರಿಗಳು ಜಾರಿ ನಿರ್ದೇಶನಾಲಯ(ಈ.ಡಿ.)ದ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ
View more