ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗುಜರಾತ್: ದಲಿತರ ವಿವಾಹ ಮೆರವಣಿಗೆ ಮೇಲೆ ದಾಳಿ

ಗುಜರಾತ್: ದಲಿತರ ವಿವಾಹ ಮೆರವಣಿಗೆ ಮೇಲೆ ದಾಳಿ

Fri, 27 May 2022 18:12:56  Office Staff   Vb

ಅಹ್ಮದಾಬಾದ್: ದಲಿತ ಮಹಿಳೆಯ ವಿವಾಹ ಮೆರವಣಿಗೆ ಮೇಲೆ ಮೇಲ್ವಾತಿ (ಠಾಕೂರ್)ಯ ಹಲವರು ದಾಳಿ ನಡೆಸಿದ ಘಟನೆ ಗುಜರಾತ್‌ನ ಅಹದಾಬಾದ್‌ನ ದಂಗಾರ್ವ ಗ್ರಾಮದಲ್ಲಿ ಗುರುವಾರ ನಡೆದಿದೆ. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ದಂಗಾರ್ವ ಗ್ರಾಮಕ್ಕೆ ತೆರಳಿದ್ದಾರೆ ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿವಾಹ ಪೂರ್ಣಗೊಂಡ ಬಳಿಕ ಎಫ್‌ಐಆರ್ ದಾಖಲಿಸಲು ವಧುವಿನ ಕುಟುಂಬ ನಿರ್ಧರಿಸಿದೆ.

ತಾರಾ ಜಗದೀಶ್‌ ಪರ್ಮಾರ್ ಹಾಗೂ ರಾಹುಲ್ ಹರೀಶ್ ಪರ್ಮಾರ್ ಅವರ ವಿವಾಹವನ್ನು ಗುರುವಾರ ಅಪರಾಹ್ನ ನಿಗದಿಪಡಿಸಲಾಗಿತ್ತು.


Share: