Sun, 14 May 2023 01:20:30Office Staff
ಭಟ್ಕಳ: ೩೨ಸಾವಿರಕ್ಕೂ ಅಧಿಕ ಮತ ಪಡೆದು ಉ.ಕ ಜಿಲ್ಲೆಯಲ್ಲಿಯೆ ಅತ್ಯಧಿಕ ಮತಗಳ ಅಂತರದಿ0ದ ಕಾಂಗ್ರೇಸ್ ಪಕ್ಷದ ಮಾಂಕಾಳ್ ವೈದ್ಯ ಗೆಲುವು ದಾಖಲಿಸಿದ್ದು ಕಾಂಗ್ರೇಸ್ ಸರ್ಕಾರದಲ್ಲಿ ಅವರಿಗೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಭಟ್ಕಳದ ರಾಜಕೀಯ, ಸಾಮಾಜಿಸ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಕಾಂಗ್ರೇಸ್ ಉನ್ನತ ಮುಖಂಡರನ್ನು ಆಗ್ರಹಿಸಿದೆ.
View more
Thu, 11 May 2023 20:00:21Office Staff
ಚಿಕ್ಕಮಗಳೂರು: ಕಾರು ಹಾಗೂ ಟಿಟಿ ವಾಹನವೊಂದು ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ 3 ವರ್ಷದ ಮಗು ಸಹಿತ ಇಬ್ಬರು ಮೃತಪಟ್ಟ ಘಟನೆ ಬೆಂಗಳೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ಇಂದು ಮಧ್ಯಾಹ್ನ ಸಂಭವಿಸಿರುವುದು ವರದಿಯಾಗಿದೆ.
View more
Thu, 11 May 2023 05:16:07Office Staff
ಕಾಂಗ್ರೆಸ್ ಪಕ್ಷವು 122 ರಿಂದ 140 ಸೀಟುಗಳನ್ನು ಗಳಿಸಿ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ 62-80, ಜೆಡಿಎಸ್ 20-25 ಹಾಗೂ ಇತರ ಪಕ್ಷಗಳು 0-3 ಸೀಟುಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
View more
Thu, 11 May 2023 03:42:37Office Staff
ಕ್ಷೇತ್ರದಲ್ಲಿ ಶೇ.೭೭,೪೨ ಮತದಾನವಾಗಿದ್ದು ತಾಲೂಕಿನ ಮುಟ್ಟಳ್ಳಿ ಪಂಚಾಯತ್ ವ್ಯಾಪ್ತಿಯ ಎರಡು ಕಡೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಕುರಿತಂತೆ ವರದಿಯಾಗಿದೆ. ಅಲ್ಲದೆ ಎರಡು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಕೆಲ ಹೊತ್ತು ಮತದಾನ ಸ್ಥಗಿತಗೊಂಡಿದ್ದ ಕುರಿತಂತೆ ವರದಿಯಾಗಿದೆ.
View more
Wed, 10 May 2023 23:29:03Office Staff
ಬೆಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಪುನರಾಯ್ಕೆಯಾಗಿದ್ದಾರೆ. 2019-2023 ರವರೆಗೆ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ. ಬೆಳಗಾಮಿಯವರನ್ನು ಜಮಾಅತ್ ರಾಷ್ಟ್ರಾಧ್ಯಕ್ಷ ಸಯ್ಯದ್ ಸಾದಾತುಲ್ಲಾ ಹುಸೈನಿ ಪುನರ್ ಆಯ್ಕೆ ಮಾಡಿದ್ದಾರೆ.
View more
Wed, 10 May 2023 16:11:49Office Staff
ಭಟ್ಕಳ: ಭಟ್ಕಳ-ಹೊನ್ನವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ತಮ್ಮ ಕುಟುಂಬ ಸಮೇತ ಗುರುವಾರ ಬೆಳಿಗ್ಗೆ 8 ಗಂಟೆಗೆ ಭಟ್ಕಳ ತಾಲೂಕಿನ ಯಲ್ವಡಿ -ಕವೂರ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
View more
Wed, 10 May 2023 15:28:12Office Staff
ಭಟ್ಕಳ: ತಾಲೂಕಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ನೆರ್ಲೆಸರ ಹನಿಫಾಬಾದ್ ನ ಮತಗಟ್ಟೆ ಸಂಖ್ಯೆ ೧೬೯ ರಲ್ಲಿ ಇಂದು ಬೆಳಿಗ್ಗೆ ೭ ಗಂಟೆಯಿಂದ ಆರಂಭಗೊಂಡಿದ್ದು ೬೦ ಮತಗಳು ಚಲಾವಣೆಯಾದ ನಂತರ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು ೪೫ನಿ. ಕ್ಕೂ ಹೆಚ್ಚು ಕಾಲ ಜನರು ಸಾಲಿನಲ್ಲಿ ನಿಂತುಕೊಳ್ಳಬೇಕಾಯಿತು.
View more
Wed, 10 May 2023 12:47:48Office Staff
ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ರಾಜ್ಯದ ಒಟ್ಟು 5,30,85,566 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
View more