Sat, 20 May 2023 02:45:02Office Staff
ಶೃಂಗೇರಿ (ಚಿಕ್ಕಮಗಳೂರು): ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ವರದಿಯಾಗಿದೆ.
View more
Sat, 20 May 2023 02:21:28Office Staff
Big Breaking News.... ಹೊಸದಿಲ್ಲಿ: 2000 ರೂ.ಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ. ಅಲ್ಲದೇ 2023ರ ಸೆಪ್ಟೆಂಬರ್ 30ರ ಒಳಗಡೆ ನೋಟುಗಳನ್ನು ಬದಲಾಯಿಸಬೇಕಾಗಿ RBI ಸೂಚಿಸಿದೆ.
View more
Fri, 19 May 2023 17:28:13Office Staff
ಬಿಜೆಪಿ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲು ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೆಸರಿನಲ್ಲಿ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ನಡೆದಿರುವ ಪೊಲೀಸ್ ದೌರ್ಜನಕ್ಕೆ ಸಂಬಂಧಿಸಿ ಪಿಎಸೈ ಸಹಿತ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
View more
Fri, 19 May 2023 16:59:19Office Staff
ಕೇಂದ್ರ ಸಚಿವ ಕಿರಣ್ ರಿಜಿಜು ಕೈಯಿಂದ ಕಾನೂನು ಮತ್ತು ನ್ಯಾಯ ಖಾತೆಯನ್ನು ವಾಪಸ್ ಪಡೆಯಲಾಗಿದೆ ಹಾಗೂ ಆ ಖಾತೆಯನ್ನು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಾಲ್ ಗೆ ವಹಿಸಲಾಗಿದೆ ಎಂದು ರಾಷ್ಟ್ರಪತಿ ಭವನವು ಗುರುವಾರ ಹೊರಡಿಸಿದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ
View more
Fri, 19 May 2023 16:37:45Office Staff
ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕೊನೆಗೂ ಅಂತ್ಯಗೊಂಡಿದ್ದು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ.
View more
Wed, 17 May 2023 17:26:22Office Staff
ಕಾರವಾರ: ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಕಾರವಾರ ಹಾಗೂ ಭಟ್ಕಳ ಕ್ಷೇತ್ರದ ನೂತನ ಶಾಸಕರಾದ ಸತೀಶ ಕೃಷ್ಣ ಸೈಲ್ ಮತ್ತು ಮಂಕಾಳು ವೈದ್ಯ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು. ಕಾರವಾರ ತಾಲೂಕಿನ ಸಂಬಂಧಿತ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿದ್ದರೆ ಅಂಕೋಲಾ ಹೊನ್ನಾವರ ಭಟ್ಕಳ ತಾಲೂಕಿನ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಹಾಜರಿದ್ದರು.
ತಮ್ಮ ತಮ್ಮ
View more
Wed, 17 May 2023 05:04:53Office Staff
ಕಾರವಾರ: ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನೆರವೇರುವಲ್ಲಿ ಪಾತ್ರ ವಹಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಜವಾನರನ್ನ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು.
View more
Tue, 16 May 2023 18:45:22Office Staff
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ಕಗ್ಗಂಟಾಗಿದ್ದು ಇದೀಗ ಸಂಭಾವ್ಯ ಸಚಿವರ ಪಟ್ಟಿ ಸಿದ್ದಗೊಂಡಿದೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಉ.ಕ ಜಿಲ್ಲೆಯಿಂದ ಶಿರಸಿ ಕ್ಷೇತ್ರದಿಂದ ನೂತನವಾಗಿ ಆಯ್ಕೆಗೊಂಡಿರುವ ಭೀಮಣ್ಣ ನಾಯ್ಕ ರ ಹೆಸರು ಕೇಳಿ ಬರುತ್ತಿದ್ದು ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಹಾಗೂ ಮಾಂಕಾಳ್ ವೈದ್ಯರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ.
View more
Mon, 15 May 2023 21:07:21Office Staff
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಎಐಟಿಎಂ) ಮೇ 20 ಮತ್ತು 21 ರಂದು ನಡೆಯಲಿರುವ ಮುಂಬರುವ ಸಿಇಟಿ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಮೇ 13 ರಂದು ಪಿಯು ವಿದ್ಯಾರ್ಥಿಗಳಿಗೆ ಆಫ್ಲೈನ್ ಮೋಡ್ನಲ್ಲಿ ಅಣಕು ಸಿಇಟಿ ಪರೀಕ್ಷೆಯನ್ನು ಆಯೋಜಿಸಿತ್ತು.
View more