Mon, 17 Jul 2023 04:59:45Office Staff
ಕಾರ್ಕಳ : ಇಸ್ಲಾಂ ವಿದ್ಯೆಗೆ ಬಹಳ ಮಹತ್ವವನ್ನು ನೀಡಿದೆ. ಹೆಣ್ಣು ಮಕ್ಕಳಿಗೆ ವಿದ್ಯೆ ನೀಡುವಲ್ಲಿ ನಾವೆಂದು ಹಿಂದೆ ಉಳಿದಿಲ್ಲ. ಆದರೆ ನಮ್ಮ ಹೆಣ್ಣು ಮಕ್ಕಳನ್ನು ಹಿಂದುಳಿಸುವ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರದ ವಿರುದ್ಧ ಹೆಣ್ಣುಮಕ್ಕಳು ವಿದ್ಯಾವಂತರಾಗುವುದರ ಮೂಲಕ ಸೂಕ್ತ ಉತ್ತರ ನೀಡಬೇಕಾಗಿದೆ. ನೀವು ಬೆಳೆಯುವ ಮೂಲಕ ನಿಮ್ಮ ಸಹಪಾಠಿಗಳು ಸಮಾಜ ಸಮುದಾಯ ಬೆಳೆಸುವ ಕೆಲಸ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ರಿ)ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರಿಸ್ ಕರೆ ನೀಡಿದರು.
View more
Mon, 17 Jul 2023 04:54:09Office Staff
ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಣಗುಡ್ಡೆ ಎ.ವಿ ಬಾಳಿಗಾ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಭಾಗಿಯಾದ ಸುಮಾರು 100 ರಿಂದ 200 ಮಾದಕ ವ್ಯಸನಕ್ಕೆ ಒಳಗಾದ ಯುವಕರು ಮತ್ತು ಅವರ ಪೋಷಕರಿಗೆ ಒಂದು ದಿನದ ಆಪ್ತ ಸಮಾಲೋಚನ ಕಾರ್ಯಕ್ರಮವನ್ನು ಉಡುಪಿ ನಗರದ ಡಾ| ಎ.ವಿ ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ದೊಡ್ಡಣಗುಡ್ಡೆಯಲ್ಲಿ ಆಯೋಜಿಸಲಾಗಿತ್ತು.
View more
Mon, 17 Jul 2023 04:40:09Office Staff
ಕಾರವಾರ: ಒಳ್ಳೆಯ ಕೆಲಸ ಮಾಡಲು ಯಾವುದೇ ನಿಗದಿಯ ದಿನ ಆಗಬೇಕು ಎಂದಿಲ್ಲ. ವ್ಯಕ್ತಿ ಎಂದ ಮೇಲೆ ತಪ್ಪುಗಳಾಗುವುದು ಸಹಜ. ಆಡಳಿತ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಮಾಧ್ಯಮಗಳು ಎಚ್ಚರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಭಾನುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ
View more
Sun, 16 Jul 2023 22:05:44Office Staff
ಭಟ್ಕಳ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಭಟ್ಕಳದ ಮಖ್ದೂಮ್ ಕಾಲೋನಿಯ ಮನೆಯೊಂದರಲ್ಲಿ ಭಾನುವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಎಲೆಕ್ಟ್ರಾನಿಕ್ ವಸ್ತುಗಳು, ಮೂರು ಕಪಾಟುಗಳು, ಹಾಸಿಗೆ, ವಿವಿಧ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
View more
Sun, 16 Jul 2023 06:37:17Office Staff
ಬೆಂಗಳೂರು: ಸಾರ್ವಜನಿಕ ಸೇವೆ ಮತ್ತು ಆಡಳಿತಕ್ಕೆ ನೀಡಿದ ಕೊಡುಗೆಗಳಿಗೆ ಹೆಸರಾದ ಸ್ಪೀಕರ್ ಯುಟಿ ಖಾದರ್ ಅವರು ಭಾರತದ ಪ್ರತಿಷ್ಠಿತ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.
View more
Sun, 16 Jul 2023 06:00:52Office Staff
ಭಟ್ಕಳ: ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ಅಪೂರ್ಣ ಕಾಮಗಾರಿಯಿಂದಾಗಿ ಉಂಟಾದ ನಿರಂತರ ಸಮಸ್ಯೆಗಳನ್ನು ಉ.ಕ. ಜಿಲ್ಲಾಧಿಕಾರಿ ಡಾ.ಪ್ರಭುಲಿಂಗ ಕವಳಿಕಟ್ಟೆ ಸಮಗ್ರವಾಗಿ ಪರಿಶೀಲಿಸಿದ್ದು, ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾಡಳಿತದ ವತಿಯಿಂದ ರಾಜ್ಯ ಸರ್ಕಾರ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ ಎಚ್ ಎಐ) ಸಲ್ಲಿಸಲಾಗುವುದು ಎಂದು ಘೋಷಿಸಿದರು.
View more
Sun, 16 Jul 2023 05:25:20Office Staff
ಭಟ್ಕಳ: ಕಳೆದ ಜೂನ್ 22 ರಂದು ರಾತ್ರಿ ನಗರದ ಪ್ರಸಿದ್ದ ಉದ್ಯಮಿ ರಿಬ್ಕೋ ಸಂಸ್ಥೆಯ ಮಾಲಿಕ ಎಸ್.ಎ ರಹ್ಮಾನ್ ಶಾಬಂದ್ರಿಯವರ ವೆಂಕಟಾಪುರದ ರಿಬ್ಕೋ ಕಾಲೋನಿಯಲ್ಲಿರುವ ಮನೆ ಕಳುವು ಪ್ರಕರಣವನ್ನು ಬೇಧಿಸಿದ ಗ್ರಾಮೀಣ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಗದು ಸೇರಿದಂತೆ 12 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜು.೧೦ ರಂದು ವಶಪಡಿಸಿಕೊಂಡಿದ್ದಾಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.
View more