ಭಟ್ಕಳ: ಭಟ್ಕಳದ ಪ್ರತಿಷ್ಠಿತ ಮಹಿಳಾ ಬ್ಯಾಂಕಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಯನಾ ನಾಯ್ಕ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷೆಯಾಗಿ ಸುಕನ್ಯಾ ನಾಯ್ಕ ಆಯ್ಕೆಗೊಂಡರು.
ಸದಸ್ಯರಾದ ರಾಧಾ ಶ್ರೀಧರ ಮೊಗೇರ, ಶೋಭಾ ಗೋವರ್ಧನ ನಾಯ್ಕ, ವೀಣಾ ರಾಮಚಂದ್ರ ನಾಯ್ಕ, ಸುನೀತ ರುಂಡ ಡಿಸೋಜ, ವಿಜಯ ಜಯಂತ ನಾಯ್ಕ ಚುನಾವಣೆಯಲ್ಲಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಗೋಪಾಲ ನಾಯ್ಕರ ಮೇಲುಸ್ತುವಾರಿಯಲ್ಲಿ ಸಂಪೂರ್ಣ ಪ್ರಕ್ರಿಯೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಜಾಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಂಜಪ್ಪ ನಾಯ್ಕ, ಹಿಂದುಳಿದ ಘಟಕದ ಅಧ್ಯಕ್ಷ ವಿಷ್ಣು ದೇವಡಿಗ, ಬೆಳ್ಕೆಯ ಮಂಜುನಾಥ ನಾಯ್ಕ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ರಾಜೇಶ ನಾಯ್ಕ, ಖಜಾಂಚಿ ದೇವಿದಾಸ ಆಚಾರಿ, ನಾಗೇಶ ನಾಯ್ಕ ಮಾವಳ್ಳಿ, ಜಾಲಿ ಪಟ್ಟಣ ಪಂಚಾಯತ ಸದಸ್ಯ ರಮೇಶ ನಾಯ್ಕ, ಭಾಸ್ಕರ ಮೊಗೇರ, ಶ್ರೀಧರ ಮೊಗೇರ ನಾಗೇಂದ್ರ ನಾಯ್ಕ, ರಾಜು ನಾಯ್ಕ ಹೇರಾಡಿ, ದುರ್ಗಾದಾಸ ಮೊಗೇರ, ಭಾಸ್ಕರ ನಾಯ್ಕ ಕೈಕೀಣಿ, ಸುಬ್ರಹ್ಮಣ್ಯ ಶೆಟ್ಟಿ, ಮುಟ್ಟಳ್ಳಿ ಜಟ್ಟಪ್ಪ ನಾಯ್ಕ, ನಾಗರಾಜ ನಾಯ್ಕ, ಪ್ರಕಾಶ ನಾಯ್ಕ, ವೆಂಕಟೇಶ ದೇವಡಿಗ, ಗೋವರ್ಧನ ನಾಯ್ಕ ಪಾಲ್ಗೊಂಡಿದ್ದರು.