ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು:ಎರಡು ಮಸೀದಿಗಳ ವಿವಾದ: ಬ್ಯಾನರ್‌ಗೆ ಬೆಂಕಿ

ಮಂಗಳೂರು:ಎರಡು ಮಸೀದಿಗಳ ವಿವಾದ: ಬ್ಯಾನರ್‌ಗೆ ಬೆಂಕಿ

Mon, 08 Feb 2010 17:31:00  Office Staff   S.O. News Service

ಮಂಗಳೂರು: ಒಳಗೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದ ಬ್ಯಾನರ್‌ ಕಟ್ಟುವ ವಿಚಾರ ಮುಂದುವರಿದ ಭಾಗ ಎಂಬಂತೆ ಮಸೀದಿಯ ಉರೂಸ್‌ ಸಮಾರಂಭದ ಬ್ಯಾನರ್‌ಗೆ ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ.

ಉಳ್ಳಾಲ ಬಳಿಯ ಉಚ್ಚಿಲದ ಮಸೀದಿಯ ಉರೂಸ್‌ ಸಮಾರಂಭದ ಬ್ಯಾನರನ್ನು ಪಂಪ್‌ವೆಲ್‌ ಮಸೀದಿಗೆ ಕಟ್ಟಲಾಗಿದ್ದು, ಇದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಅದರ ಹೊಣೆ ಬಜರಂಗದಳ ಇಲ್ಲವೇ ಸ್ಥಳೀಯ ಮಸೀದಿ ಮೇಲೆ ಬೀಳುವಂತೆ ಚಾಣಾಕ್ಷತನ ಮೆರೆದಿದ್ದಾರೆಂದು ತಿಳಿದುಬಂದಿದೆ. ಆದರೆ ಒಂದು ಮೂಲದ ಪ್ರಕಾರ ಪಂಪ್‌ವೆಲ್‌ ಮಸೀದಿ ಉರೂಸ್‌ ಸಮಾರಂಭದ ಬ್ಯಾನರನ್ನು ಉಚ್ಚಿಲದಲ್ಲಿ ಈ ಹಿಂದೆ ಕಟ್ಟಲಾಗಿದ್ದು ಇದಕ್ಕೆ ಸ್ಥಳೀಯ ಮಸೀದಿಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅಲ್ಲಿಂದ ಬ್ಯಾನರ್‌ ತೆಗೆಯಲಾಗಿತ್ತು. ಆ ಬಳಿಕ ಇತ್ತೀಚೆಗೆ ಉಚ್ಚಿಲ ಮಸೀದಿಯ ಉರೂಸ್‌ನ ಬ್ಯಾನರ್‌ ಪಂಪ್‌ವೆಲ್‌ ಮಸೀದಿ ಬಳಿ ಹಾಕಲಾಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಇದಕ್ಕೆ ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾಗಿದೆ. ಆದರೆ ಈ ಹಿಂದೆ ನಡೆದ ಘಟನೆಗಳ ಅರಿವಿದ್ದ ಕಿಡಿಗೇಡಿಗಳು ಇದರ ಲಾಭ ಪಡೆಯಲು ಬ್ಯಾನರ್‌ಗೆ ಬೆಂಕಿ ಹಚ್ಚಿರಬೇಕು ಎಂದು ಅಂದಾಜಿಸಲಾಗಿದೆ.
 
ಸೌಜನ್ಯ: ಜಯಕಿರಣ 

Share: