ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಎಚ್ಚರಿಕೆ.

ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಎಚ್ಚರಿಕೆ.

Sat, 18 Feb 2023 04:56:39  Office Staff   SO News

ಕಾರವಾರ : ಪ್ರವಾಸೋದ್ಯಮ ನೀತಿ ಅನ್ವಯ ಇಲಾಖೆಯಿಂದ ಪ್ರವಾಸಿಗರ ಅನೂಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ಅನುಮೋದನೆ ಪಡೆದು ಹೋಂ ಸ್ಟೇ ನಡೆಸುವುದು ಕಡ್ಡಾಯವಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿಯಮ ಉಲ್ಲಂಘಿಸಿ  ಇಲಾಖೆಯ ಅನುಮೋದನೆಯನ್ನು ಪಡೆಯದೆ ಹೋಂಸ್ಟೇ, ನಡೆಸುವುದು ಕಂಡು ಬಂದ ಹಿನ್ನೆಲೆಯಲ್ಲಿ  ಜ.25 ರಂದು  ಪತ್ರಿಕಾ ಪ್ರಕಟಣೆ ಹೊರಡಿಸಿ  30 ದಿನಗಳ ಒಳಗೆ ಆನ್ಲೈನ್ kttf.karnatakatourisum.org ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು  ಆದರೆ  ಈ ಬಗ್ಗೆ ಈ ವರೆಗು ಸೂಕ್ತ ಸ್ಪಂದನೆ ವ್ಯಕ್ತವಾಗಿರುವುದಿಲ್ಲ.

ಈ ಬಗ್ಗೆ ಮತ್ತೊಮ್ಮೆ ಪತ್ರಿಕಾ ಪ್ರಕಟಣೆ ಹೊರಡಿಸಿ  ಈ ಕೂಡಲೆ ಜಿಲ್ಲೆಯಲ್ಲಿ ಅನಧಿಕೃತವಾಗಿ ನೆಡೆಸುತ್ತಿರುವ ಎಲ್ಲ ಹೋಂಸ್ಟೇಗಳು  ಫೆ 25 ರೊಳಗಾಗಿ ಆನ್‌ಲೈನ್ kttf.karnatakatourism.org ಮೂಲಕ ಅಥವಾ  ಕೇಂದ್ರ ಸರ್ಕಾರದ  https://tourisum.gov. in ಅಡಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ಒಂದು ವೇಳೆ ಫೆ 25 ರೊಳಗೆ ನೋಂದಣಿ ಮಾಡಿಕೊಳ್ಳದ ಹೋಂ  ಸ್ಟೇ ಗಳ ವಿರುದ್ದ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಮೂಲಕ  ಕಾನೂನು ಕ್ರಮ ಜರುಗಿಸಲಾಗುವುದು.

ಹಾಗೆಯೇ ಅನಧಿಕೃತ ಮತ್ತು ಅನುಮತಿ ಪಡೆದ ಹೋಂ ಸ್ಟೇ, ಹೋಟೆಲ್,  ರೆಸಾರ್ಟ ನವರು ನಿಯಮ ಮೀರಿ ರಾತ್ರಿ ವೇಳೆಯಲ್ಲಿ ಜೋರಾಗಿ ಧ್ವನಿವರ್ಧಕಗಳ ಬಳಕೆ ಮಾಡಿ ಸ್ಥಳೀಯ ಸಾರ್ವಜನಿಕರಿಗೆ ಮತ್ತು ವನ್ಯಜೀವಿಗಳಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿರುತ್ತದೆ. ಇನ್ನೂ ಮುಂದೆ ಹೋಂ ಸ್ಟೇ, ಹೋಟೆಲ್,  ರೆಸಾರ್ಟ್ ನವರು ರಾತ್ರಿ 10.00 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆ ಮಾಡುವುದು ಕಂಡು ಬಂದಲ್ಲಿ ಅಂತಹ ಹೋಂ ಸ್ಟೇ, ಹೋಟೆಲ್,  ರೆಸಾರ್ಟಗಳ ಅನುಮತಿ ರದ್ದು ಪಡಿಸಿ ನಿಯಮಾನುಸಾರ ಕಾನೂನು  ಶಿಸ್ತು ಕಮ ವಹಿಸಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಉಪ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: