ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರ-ಭಟ್ಕಳದಲ್ಲಿ ಸಚಿವ ಮಂಕಾಳ ವೈದ್ಯರಿಗೆ ಅದ್ದೂರಿ ಸ್ವಾಗತ. ಕ್ಷೇತ್ರದ ನಾಗರಿಕರ ವಿಜಯೋತ್ಸವ ಮೆರವಣಿಗೆ.

ಹೊನ್ನಾವರ-ಭಟ್ಕಳದಲ್ಲಿ ಸಚಿವ ಮಂಕಾಳ ವೈದ್ಯರಿಗೆ ಅದ್ದೂರಿ ಸ್ವಾಗತ. ಕ್ಷೇತ್ರದ ನಾಗರಿಕರ ವಿಜಯೋತ್ಸವ ಮೆರವಣಿಗೆ.

Mon, 29 May 2023 04:30:43  Office Staff   SO News

ಭಟ್ಕಳ :  ನೂತನ ಸಚಿವರಾಗಿ  ಉತ್ತರಕನ್ನಡ ಜಿಲ್ಲೆಯ ಭಟ್ಕಳ ಹೊನ್ನಾವರ ಕ್ಷೇತ್ರಕ್ಕೆ ಆಗಮಿಸಿದ ಮಂಕಾಳ ವೈದ್ಯ ಅವರನ್ನ ಕ್ಷೇತ್ರದ ಜನತೆ ಅದ್ದೂರಿಯ ಸ್ವಾಗತ ಕೋರಿದ್ದಾರೆ.

ಭಾನುವಾರ ಮಧ್ಯಾಹ್ನ ಹೊನ್ನಾವರ ತಾಲೂಕಿನ  ಪ್ರಸಿದ್ಧ  ಇಡಗುಂಜಿ ಮಹಾಗಣಪತಿ ದೇವಾಲಯಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಅವರು, ಗಣಪತಿ‌ ದೇವರ ಆಶೀರ್ವಾದ ಪಡೆದು ಇಲ್ಲಿಂದಲೇ ತನ್ನ ಕೆಲಸ ಆರಂಭ ಎಂದು ಹೇಳಿದ್ದಾರೆ.

ಮಂಕಾಳ ವೈದ್ಯ ಸಚಿವರಾಗಿ ಕ್ಷೇತ್ರಕ್ಕೆ ಆಗಮಿಸಿದ್ದರಿಂದ  ಹೊನ್ನಾವರದ ಗೇರುಸೊಪ್ಪ ಸರ್ಕಲ್‌ನಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಮೆರವಣಿಗೆ ನಡೆಸಿದರು. ರಾತ್ರಿ ಭಟ್ಕಳದ ಸಂಶುದ್ದಿನ್ ವೃತ್ತಕ್ಕೆ ಆಗಮಿಸಿದ ವಿಹಯೋತ್ಸವ ರ್ಯಾಲಿಗೆ ಭಟ್ಕಳ ಜನತೆ ಸ್ವಾಗತಿಸಿದರು. ದಾರಿಯುದ್ದಕ್ಕೂ ಜನತೆ ಸಚಿವರಿಗೆ ಹಾರ ಹಾಕಿ ಗೌರವಿಸಿದರು.
ಇದೇ ವೇಳೆ  ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಾಗರಿಕರು ಪಟಾಕಿ ಸಿಡಿಸಿ, ಜೈಘೋಷ ಹಾಕಿ ಸಂಭೃಮಿಸಿದರು.


Share: