ಹೊನ್ನಾವರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಗೇರುಸೊಪ್ಪ ಸರ್ಕಲ್ ಬಳಿ ಗ್ಯಾಸ್ ತುಂಬಿದ ಟ್ಯಾಂಕರ್ ಪಲ್ಟಿ ಹೊಡೆದಿದೆ.
ಬುಧವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಈ ಟ್ಯಾಂಕರ್ ತೆರಳುತಿತ್ತು. ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ ಹೊಡೆದಿದೆ. ಪರಿಣಾಮವಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳುಗ್ರಾಸ್ ಸೋರಿಕೆಯಾಗದಂತೆ ಗಮನ ವಹಿಸಿದ್ದರು. ಅಲ್ಲದೇ ಸಂಚಾರ ಬಂದ್ ಮಾಡಿ ಲಘು ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದರು. ಕೆಲ ಹೊತ್ತಿನಲ್ಲಿ ಕ್ರೇನ್ ಮೂಲಕ ಸುರಕ್ಷಿತವಾಗಿ ಟ್ಯಾಂಕರ್ ಮೆಲಕ್ಕೆತ್ತಲಾಗಿದೆ. ಬಳಿಕ ಹೆದ್ದಾರಿಯಲ್ಲಿ ಸಂಚಾರ ಪುನಃ ಆರಂಭಿಸಲಾಗಿದೆ.
