ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರ : ಮನೆಯ ಮೇಲೆ ಬಿದ್ದ ಬೃಹತ್ ಮರ. ಮನೆ ಸಂಪೂರ್ಣ ಜಖಂ. ಆರು ಜನರಿಗೆ ಗಾಯ.

ಹೊನ್ನಾವರ : ಮನೆಯ ಮೇಲೆ ಬಿದ್ದ ಬೃಹತ್ ಮರ. ಮನೆ ಸಂಪೂರ್ಣ ಜಖಂ. ಆರು ಜನರಿಗೆ ಗಾಯ.

Tue, 05 Jul 2022 04:19:49  Office Staff   SO News

ಹೊನ್ನಾವರ : ಮನೆ ಮೇಲೆ ಬೃಹತ್  ಆಲದ‌ ಮರ ಬಿದ್ದು ಆರು ಮಂದಿಗೆ ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ಬಗ್ರಾಣಿ ಕ್ರಾಸ್ ಬಳಿ ನಡೆದಿದೆ.

ಮರ ಬಿದ್ದ ಪರಿಣಾಮವಾಗಿ ಮನೆ ಸಂಪೂರ್ಣ ಜಖಂ ಆಗಿದೆ. ಅಲ್ಲದೇ ಘಟನೆಯಿಂದ ಮನೆ ಮಂದಿ ಗಾಯಗೊಂಡಿದ್ದಾರೆ.

ಗಂಗಾಧರ ಶೇಟ್ ಅವರಿಗೆ‌ ಸೇರಿದ್ದ ಮನೆಯಾಗಿದ್ದು,  ಬಾಡಿಗೆ ನೀಡಲಾಗಿತ್ತು.

ಸಂಧ್ಯಾ ಶೇಟ್, ರೂಪಾ ಶೇಟ್, ಅನೀಲೇಶ‌ ಶೇಟ್,‌ಅನಿತಾ ಹರಿಕಾಂತ, ಯೋಗೀಶ ಹರಿಕಂತ್ರ, ಆರುಷ್‌ ಹರಿಕಂತ್ರ ಎಂಬುವವರು ಗಾಯಗೊಂಡಿದ್ದಾರೆ.

ಗಾಯಗೊಂಡವರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮ‌ಕ ದಳ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share: