ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೈಕೋರ್ಟ್ ಪೀಠ ಲೋಕ‌ ಅದಾಲತ್ 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ

ಹೈಕೋರ್ಟ್ ಪೀಠ ಲೋಕ‌ ಅದಾಲತ್ 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ

Sun, 14 Aug 2022 05:38:24  Office Staff   SO News

ಧಾರವಾಡ :  ಕರ್ನಾಟಕ ಉಚ್ಛ ನ್ಯಾಯಾಲಯ  ಪೀಠದಲ್ಲಿ  ನಡೆದ   ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ    183 ಪ್ರಕರಣಗಳನ್ನು  5,77,12,376 ರೂ. ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು .

 ಹಿರಿಯ ನ್ಯಾಯಮೂರ್ತಿಗಳಾದ  ಎಸ್ .ಜಿ.ಪಂಡಿತ್ ಅವರ   ಮಾರ್ಗದರ್ಶನದಲ್ಲಿ , ನ್ಯಾಯಮೂರ್ತಿಗಳಾದ  ಎಚ್.ಪಿ. ಸಂದೇಶ್ ,  ರವಿ ವಿ . ಹೊಸಮನಿ ಮತ್ತು  ಅನಂತ ರಾಮನಾಥ ಹೆಗಡೆ ಹಾಗೂ ಲೋಕ ಅದಾಲತ್‌ನ ಸದಸ್ಯರುಗಳಾದ  ಎಲ್ . ಟಿ . ಮಂಟಗಣಿ , ಎಸ್ . ಎಸ್ . ಬಾವಾಖಾನ , ಎಮ್ . ಟಿ . ಬಂಗಿ ಮತ್ತು  ಎಮ್ . ಸಿ . ಹುಕ್ಕೇರಿ ಅವರನ್ನೊಳಗೊಂಡ  4 ಪೀಠಗಳಲ್ಲಿ ವ್ಯಾಜ್ಯಗಳ ರಾಜಿ ಸಂಧಾನ ನಡೆದವು.

 ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಹಾಗೂ ವಕೀಲರಾದ ಎಮ್ . ಸಿ . ಹುಕ್ಕೇರಿ ಅವರ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ - ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿದ್ದು ಈ ಬಾರಿಯ  ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ 
ಎಂದು  ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: