ಸುಳ್ಯ, ಫೆ.15: ಸುಳ್ಯ ಪರಿಸರದಲ್ಲಿ ಪರಮೋನ್ನತ ಧಾರ್ಮಿಕ ಹುದ್ದೆ ಖಾಝಿ ಪದವಿ ಅಲಂಕರಿಸಿ ೩ ದಶಕ ಪೂರ್ತಿಗೊಳಿ ಸಿದ ಸೈಯಿದ್ ಅಬ್ದುರ್ರಹ್ಮಾನ್ ಕುಂಞಿ ಕೋಯ ತಂಙಳ್ ಅಲ್ ಬುಖಾರಿ ಉಳ್ಳಾಲ ಮತ್ತು ಸುನ್ನಿ ಮರ್ಕಝ್ ಶಿಲ್ಪಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನು ಸುಳ್ಯದಲ್ಲಿ ಸೋಮವಾರ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ಆತ್ಮೀಯ ವಾಗಿ ಸನ್ಮಾನಿಸಲಾಯಿತು.
ಸುಳ್ಯದ ಗಾಂಧಿ ನಗರ ತರ್ಬೀಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ನಡೆದ ಈ ಸಮಾರಂಭಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಸ್ಸಯಿದ್ ಉಮರುಲ್ ಫಾರೂಕ್ ತಂಙಳ್ ಪೊಸೋಟ್, ತಾಜುಲ್ ಉಲಮಾ ಮತ್ತು ಖಮರುಲ್ ಉಲಮಾರಿಬ್ಬರು ತಮ್ಮ ಅವಿಶ್ರಾಂತ ದುಡಿಮೆಯೊಂದಿಗೆ ಹಲವರು ಧಾರ್ಮಿಕ ಮತ್ತು ಲೌಕಿಕ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಮಾದರಿ ಧಾರ್ಮಿಕ ನಾಯಕರಾಗಿದ್ದಾರೆ ಎಂದು ಅಸ್ಸಯಿದ್ ಉಮರುಲ್ ಫಾರೂಕ್ ತಂಙಳ್ ಪೊಸೋಟ್ ಎಂದು ಅಭಿಪ್ರಾಯಪಟ್ಟರು.
ಈ ಉಲಮಾ ನಾಯಕರಿಬ್ಬರೂ ಸಾಕಷ್ಟು ಗ್ರಂಥಗಳನ್ನು ರಚಿಸಿದ್ದು,ಅದರ ಮೌಲ್ಯ ಅನನ್ಯವಾದುದು. ಮುಂದಿನ ತಲೆಮಾರು ಅವರ ಬದುಕಿನ ಆದರ್ಶಗಳನ್ನು ಅನುಸರಿ ಸಬೇಕು ಎಂದು ಪೊಸೋಟ್ ತಂಙಳ್ ನುಡಿದರು.
ಅಭಿನಂದನಾ ಭಾಷಣ ಮಾಡಿದ ಎಂ. ಎಸ್.ಎಂ.ಅಬ್ದರ್ರಶೀದ್ ಝೈನಿ ಕಾಮಿಲ್ ಸಖಾಫಿ, ಸುಮಾರು ೬೦ ವರ್ಷಗಳ ಕಾಲ ಆಧ್ಯಾತ್ಮಿಕ ಸಾಧನೆಗೈದ ತಾಜುಲ್ ಉಲಮಾ ಧಾರ್ಮಿಕ ನಾಯಕತ್ವದ ಕೊರತೆಯಿಂದ ಬರಡಾಗಿದ್ದ ಕರ್ನಾಟಕದಲ್ಲಿ ಹಲವರು ಪಂಡಿತರನ್ನು ಸೃಷ್ಟಿಸಿದರು. ಸಾಮಾಜಿಕ ಅನ್ಯಾಯಗಳಾದಾಗ ಎ.ಪಿ. ಉಸ್ತಾದ್ ಅದನ್ನು ಎದುರಿಸಿ ಕ್ರಾಂತಿಕಾರಿ ಬದಲಾವಣೆ ಗಳನ್ನು ಮಾಡಿದರು. ಅವರೊಬ್ಬ ಲಕ್ಷಾಂತರ ಬೆಂಬಲಿಗರನ್ನು ಹೊಂದಿರುವ ಮಹಾನ್ ನಾಯಕ ಎಂದು ಬಣ್ಣಿಸಿದರು.
ಪುತ್ತೂರು ತಾಲೂರು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್.ಇಬ್ರಾಹೀಂ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುರ್ರಹ್ಮಾನ್ ಸಖಾಫಿ ಕುಟ್ಯಾಡಿ ಪ್ರಧಾನ ಭಾಷಣ ಮಾಡಿದರು.
ಫಝಲ್ ಕೋಯಮ್ಮ ತಂಙಳ್ ಕೂರ, ಹಸನುಲ್ ಅಹದಲ್ ತಂಙಳ್ ತಂಬಿನ ಮಕ್ಕಿ, ಝೈನುಲ್ ಆಬಿದೀನ್ ತಂಙಳ್ ಎಣ್ಮೂರು, ಉಡುಪಿ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್, ಶಾಸಕ ಯು.ಟಿ.ಖಾದರ್, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಡಾ.ಶಾಹ್ ಮುಸ್ಲಿಯಾರ್ ಅರಂತೋಡು ಮುಖ್ಯ ಅತಿಥಿಗಳಾಗಿದ್ದರು.
ಕೇಂದ್ರ ನಾರು ಮಂಡಳಿ ಸದಸ್ಯ ಟಿ.ಎಂ. ಶಹೀದ್, ಗಾಂಧಿ ನಗರ ಜಮಾಅತ್ ಕಮಿಟಿ ಪೂರ್ವಾಧ್ಯಕ್ಷ ಎಸ್.ಅಬ್ದುಲ್ಲಾ ಮಲ್ನಾಡ್, ಮರ್ಕಝುಲ್ ಹುದಾ ಮಹಿಳಾ ಕಾಲೇಜು ಅಧ್ಯಕ್ಷ ಉಸ್ಮಾನ್ ಹಾಜಿ ಮಿತ್ತೂರು, ಕೊಡಗು ಜಿಲ್ಲಾ ಜಂಇಯತುಲ್ ಉಲಮಾ ಅಧ್ಯಕ್ಷ ಮಹ್ಮೂದ್ ಮುಸ್ಲಿಯಾರ್, ಸುಳ್ಯ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ನಿಕಟಪೂರ್ವ ಉಪಾಧ್ಯಕ್ಷರು ಗಳಾದ ಇಸ್ಹಾಕ್ ಸಾಹೇಬ್ ಪಾಜಪಳ್ಳಿ, ಐ.ಕುಂಞಿಪಳ್ಳಿ ಅತಿಥಿಗಳಾಗಿದ್ದರು.
ಅನ್ಸಾರಿಯಾ ಯತೀಂಖಾನ ಅಧ್ಯಕ್ಷ ಅಬ್ಬಾಸ್ ಕಟ್ಟೆಕ್ಕಾರ್ಸ್, ಜಮಾಅತ್ ಕಮಿಟಿ ಅಧ್ಯಕ್ಷ ಐ.ಇಸ್ಮಾಯೀಲ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಂ.ಅಬ್ದುಲ್ ಹಮೀದ್, ಗ್ರೀನ್ವ್ಯೂ ಶಿಕ್ಷಣ ಸಂಸ್ಥೆ ಪಿ.ಎ.ಮುಹಮ್ಮದ್, ತಾಜುಲ್ ಉಲಮಾ ಸ್ವಾಗತ ಸಮಿತಿ ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಯು.ಎಸ್. ಕುಂಞಿಕೋಯ ತಂಙಳ್, ಕಾನಕ್ಕೋಡ್ ಅಬ್ದುಲ್ ಖಾದರ್ ಮದನಿ, ಪಿ.ಕೆ.ಅಬ್ದುಲ್ಲಾ ಗುರುಂತು, ಎಸ್.ಎ.ಮಮ್ಮುಂಞಿ, ಕೆ.ಬಿ. ಮುಹಮ್ಮದ್, ಜಿ.ಎಂ.ಮೊಯ್ದು ಕುಂಞಿ ಉಪಸ್ಥಿತರಿದ್ದರು.
ಸನ್ಮಾನಿತರಿಗೆ ಕಮೀಝ್ ಧರಿಸಿ, ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಂಗಳೂರು ಖಾಝಿ ಯವರ ನಿಧನಕ್ಕೆ ಶೋಕ ವ್ಯಕ್ತಪಡಿಸಿ, ಪ್ರಾರ್ಥಿಸಲಾಯಿತು.
ಕೆ.ಎಂ.ಮುಸ್ತಫಾ ಸ್ವಾಗತಿಸಿದರು. ಯೂನುಸ್ ಸಖಾಫಿ ವಯನಾಡ್ ವಂದಿಸಿ ದರು. ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು ಕಾರ್ಯಕ್ರಮ ನಿರೂಪಿಸಿದರು.
ಎ.ಪಿ.ಉಸ್ತಾದ್ಗೆ ‘ಭಾರತ ರತ್ನ’ಕ್ಕೆ ಆಗ್ರಹ
ವಿಶ್ವದ ೫೦೦ ಶ್ರೇಷ್ಠರಲ್ಲಿ ಓರ್ವನೆಂದು ಗುರುತಿಲ್ಪಟ್ಟ, ಭಾರತದಲ್ಲಿ ಸಾಮೂ ದಾಯಿಕ ಕ್ರಾಂತಿಗೆ ಕಾರಣಕರ್ತರಾದ ಅಖಿಲ ಭಾರತ ಸುನ್ನಿ ಜಂಇಯತುಲ್ ಉಲಮಾದ ಪ್ರ.ಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕು ಎಂದು ಸ್ವಾಗತ ಸಮಿತಿ ಸಂಚಾಲಕ ಕೆ.ಎಂ.ಮುಸ್ತಫಾ ಆಗ್ರಹಿಸಿದರು.