ಭಟ್ಕಳ, ಜನವರಿ 21:ಇಲ್ಲಿನ ನಾಮದಾರಿ ಸಮಾಜದವರ ಗುರುಮಠವಾದ ಆಸಕೇರಿಯ ಶ್ರೀ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವರ ಪಾಲಕಿ ಮಹೋತ್ಸವ ನಾಳೆ ಬೆಳಿಗ್ಗೆ ಧರ್ಮಸ್ಥಳ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ಆ ಪ್ರಯಯಕ್ತ ದೇವಸ್ಥಾನದಲ್ಲಿ ಸತ್ಯನಾರಾಯಣ ವೃತ, ಮಹಾಣಪತಿ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಸಂಜೆ ೫ ಗಂಟೆಗೆ ದೇವರ ಪಾಲಕಿ ಮೆರವಣಿಗೆ ಹೊರಡಲಿದ್ದು, ರಾತ್ರಿ ೧೨ ಗಂಟೆಗೆ ರಂಗ ಪೂಜೆ ಏರ್ಪಡಿಸಲಾಗಿದೆ. ಜ.೨೩ ರಂದು ರಾತ್ರಿ ಶ್ರೀನಿವಾಸ ಕಲಾ ಮಿತ್ರ ಮಂಡಳಿ ಇವರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳೂ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನದ ಆಡಳಿತ ಸಮಿತಿಯ ಮುಖಂಡ ಟಿ ಎನ್ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.