ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ನಾಳೆಯಿಂದ ಭಟ್ಕಳ ಪುರಸಭಾ ದಿನಗೂಲಿ ಕಾರ್ಮಿಕರ ಧರಣಿ

ಭಟ್ಕಳ:ನಾಳೆಯಿಂದ ಭಟ್ಕಳ ಪುರಸಭಾ ದಿನಗೂಲಿ ಕಾರ್ಮಿಕರ ಧರಣಿ

Thu, 21 Jan 2010 15:24:00  Office Staff   S.O. News Service
ಭಟ್ಕಳ, ಜನವರಿ 21:ಸೇವೆಯಿಂದ ಖಾಯಂ ಗೊಳಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಪುರಸಭೆಯ ದಿನಗೂಲಿ ನೌಕರರು ನಾಳೆ ಬೆಳಿಗ್ಗೆ ಪುರಸಭಾ ಎದುರಿಗೆ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿದ್ದಾರೆ.
 
ಭಟ್ಕಳ ಪುರಸಭೆಯಲ್ಲಿ ಕಳೆದ 11  ವರ್ಷಗಳಿಂದ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ನಾವು ಈಗಾಗಲೇ ಸಾಕಷ್ಟು ಬಾರಿ ಸೇವೆಯಿಂದ ನಮ್ಮನ್ನು ಖಾಯಂ ಗೊಳಿಸಬೇಕು ಎಂದು ಆಗ್ರಹಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಳೆಯಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ದಿನಕಗೂಲಿ ಕಾರ್ಮಿಕರು ಪತ್ರಿಕೆಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: