ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೀಲ್ ಸಂಸ್ಥೆಯಿಂದ ಅ.೨೬ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಹೀಲ್ ಸಂಸ್ಥೆಯಿಂದ ಅ.೨೬ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Thu, 26 Oct 2023 00:13:25  Office Staff   SOnews

 

ಭಟ್ಕಳ: ಭಟ್ಕಳದ ಕಪಡಾ ಬ್ಯಾಂಕ್ ಎಂದು ಖ್ಯಾತಿ ಹೊಂದಿರುವ ಹೀಲ್ ಸಂಸ್ಥೆಯು ಅ.೨೬ ರಂದು ಬೆಳಿಗ್ಗೆ ೭.೩೦ರಿಂದ ಸಂಜೆ ೩ಗಂಟೆ ವರೆಗೆ  ಶಿಫಾ ಕ್ರಾಸ್ ಬಳಿಯ ಹಳೆಯ ಶಿಫಾ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಕ ಅಬ್ದುಲ್ ಮುನೀಮ್ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಬುಧವಾರ ಸಂಜೆ ಹೀಲ್ ಕಾರ್ಯಲಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದರು. ಭಟ್ಕಳದ ಹೀಲ್ ಹೆಲ್ತ್ ಕೇರ್ ಹಾಗೂ ಅನ್ನವಾಯತ್ ಅಬುದಾಬಿ ಇದರ ಸಹಯೋಗದೊಂದಿಗೆ ನಡೆಯುವ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಯನ್ನಪೋಯ ಆಸ್ಪತ್ರೆಯ ಪ್ರಸಿದ್ದ ವೈದ್ಯರು ಭಾಗವಹಿಸಲಿದ್ದಾರೆ. ಮಹಿಳೆಯರ ರೋಗಗಳ ತಜ್ಞೆ ಡಾ.ಷರಫ್ ಹೊನ್ನಾನಿ, ನರರೋಗ ತಜ್ಞೆ, ಡಾ.ಸಲ್ಮಾ ಸನಾ, ದಂತ ವೈದ್ಯರ ತಂಡ, ಕ್ಯಾನ್ಸರ್ ರೋಗ ತಪಾಸಣೆ ಸೇರಿದಂತೆ ವಿವಿಧ ರೊಗಳ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಹೀಲ್ ಸಂಸ್ಥೆಯು ಮಾನವೀಯ ಸೇವೆಯಲ್ಲಿ ನಿರತವಾಗಿದ್ದು ಯಾವುದೇ ಧರ್ಮ, ಜಾತಿಯ ಬೇಧವಿಲ್ಲದೆ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಆಸಕ್ತರು ಇದರ ಸದೂಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.


Share: