ಭಟ್ಕಳ : ತಾಲೂಕಿನ ಹಾಡುವಳ್ಳಿಯ ಒಣಿಬಾಗಿಲಿನಲ್ಲಿ ನಾಲ್ವರನ್ನ ಹತ್ಯೆಗೈದ ಪ್ರಮುಖ ಆರೋಪಿಗಳನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲ್ಯಾಣಿಯ ವಿನಯ್ ಭಟ್, ಶ್ರೀಧರ್ ಭಟ್ ರನ್ ಪೊಲೀಸರು ಶಿವಮೊಗ್ಗದಲ್ಲಿ ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಸಂಜೆ ಒಂದೇ ಕುಟುಂಬದ ಶಂಭು ಭಟ್ (70), ಮಾದೇವಿ ಭಟ್ (58), ರಾಘವೇಂದ್ರ ಭಟ್ (34), ಕುಸುಮಾ ಭಟ್ (30) ಅವರನ್ನ ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿತ್ತು. ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ಕೊಲೆ ಪ್ರಕರಣ ಬೇಧಿಸಲು ಮೂರು ತಂಡಗಳನ್ನ ಮಾಡಲಾಗಿತ್ತು. ಪ್ರಕರಣ ಸಂಬಂಧ ಮನೆಯ ಸೊಸೆ ವಿದ್ಯಾ ಭಟ್ ಅವರನ್ನ ವಶಕ್ಕೆ ಪಡೆದಿದ್ದರು. ಇದೀಗ ಒಂದೇ ಕುಟುಂಬದ ಅಪ್ಪ, ಮಗಳು ಹಾಗೂ ಮಗನನ್ನ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.