ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಾಡುವಳ್ಳಿ ಭೀಕರ ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನ ಕರೆತಂದು ಪೊಲೀಸರು ಸ್ಥಳ ಮಹಜರು

ಹಾಡುವಳ್ಳಿ ಭೀಕರ ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನ ಕರೆತಂದು ಪೊಲೀಸರು ಸ್ಥಳ ಮಹಜರು

Wed, 01 Mar 2023 06:46:00  Office Staff   so news

ಭಟ್ಕಳ: ತಾಲೂಕಿನ ಹಾಡುವಳ್ಳಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಾಧೀಶ ವಿನೋದ ಮುಂದೆ 
ಹಾಜರುಪಡಿಸಲಾಯಿತು.
ನಂತರ ಪೊಲೀಸರು  ಆರೋಪಗಳನ್ನು ಮನೆಗೆ ಕರೆದುಕೊಂಡು ಹೋಗಿ  ಮನೆಯ ಕೋಣೆಯಲ್ಲಿನ ಮಹಡಿ ಮೇಲೆ ಕೊಲೆಗೆ ಬಳಸಿದ ಕತ್ತಿಯನ್ನು ಬಚ್ಚಿಡಲಾಗಿತ್ತು,ಮೊಬೈಲ್ ಪೋನ್,ಸೇರಿದಂತೆ ವಶಪಡಿಸಿಕೊಳ್ಳಲಾಗಿದೆ.
ನಂತರ ಘಟನೆಯ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ನಡೆಸಿ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹತ್ತಿರ ಪೋಲಿಸರು ಹೆಚ್ಚಿನ ಮಾಹಿತಿಯನ್ನು ಪಡೆದು ಕೊಂಡಿದ್ದಾರೆ.
ಸ್ಥಳದಲ್ಲಿ ನೂರಾರು ಜನರು ಜಮಾ ಗೊಂಡು ಆರೋಪಗಳಿಗೆ  ಹಿಡಿಶಾಪ ಹಾಕಿದರು.ನಾಲ್ವರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿನಯ್ ಭಟ್, ಆತನ ತಂದೆ ಶ್ರೀಧರ ಭಟ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಶಂಭು ಭಟ್ಟರ ಸೊಸೇ ವಿದ್ಯಾ ಭಟ್ಟರನ್ನು ಈಗಾಗಲೇ ಪೊಲೀಸರು ಬಂಧಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಚಂದನ ಗೋಪಾಲ,ಪಿ.ಎಸ್.ಐ ಶ್ರೀಧರ ನಾಯ್ಕ ಮುಂತಾದವರು 
ಉಪಸ್ಥಿತಿ ಇದ್ದರು.


Share: