ಬೆಳಗಾವಿ:ಏಪ್ರಿಲ್:೨೯: ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಜಿಲ್ಲೆಯಲ್ಲಿ ಒಟ್ಟು ೩೨,೬೭೭ ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ.
ಜಿಲ್ಲೆಯ ಒಟ್ಟು ೪೬೪ ಗ್ರಾಮ ಪಂಚಾಯತ್ಗಳ ೮೧೧೪ ಸ್ಥಾನಗಳಿಗೆ ಏಪ್ರಿಲ್ ೨೧ ರಿಂದ ೨೮ ರವರೆಗೆ ಒಟ್ಟು ೩೨,೬೭೭ ಜನರು ನಾಮಪತ್ರ ಸಲ್ಲಿಸಿದಂತಾಗಿದೆ ಎಂದು ಅಪರ ಜಿಲ್ಲಾ ದಂಡಾಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ತಾಲೂಕಿನಲ್ಲಿ-೩೮೩೩, ಖಾನಾಪೂರ ತಾಲೂಕಿನಲ್ಲಿ-೨೩೧೦, ಹುಕ್ಕೇರಿ ತಾಲೂಕಿನಲ್ಲಿ-೩೫೯೯, ಬೈಲಹೊಂಗಲ ತಾಲೂಕಿನಲ್ಲಿ-೨೪೧೭, ಸವದತ್ತಿ ತಾಲೂಕಿನಲ್ಲಿ-೨೩೧೭, ಗೋಕಾಕ ತಾಲೂಕಿನಲ್ಲಿ-೪೪೧೫, ರಾಮದುರ್ಗ ತಾಲೂಕಿನಲ್ಲಿ-೧೮೫೦, ಚಿಕ್ಕೋಡಿ ತಾಲೂಕಿನಲ್ಲಿ-೫೧೪೯, ಅಥಣಿ ತಾಲೂಕಿನಲ್ಲಿ-೩೬೭೯ ಹಾಗೂ ರಾಯಬಾಗ ತಾಲೂಕಿನಲ್ಲಿ-೩೧೦೮ ಸೇರಿದಂತೆ ಒಟ್ಟು ೩೨೬೭೭ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ೫೧೪೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ನಾಮಪತ್ರ ಸಲ್ಲಿಸಿದ ತಾಲೂಕಾಗಿದೆ.. ರಾಮದುರ್ಗ ತಾಲೂಕಿನಲ್ಲಿ ೧೮೫೦ ನಾಮಪತ್ರ ಸಲ್ಲಿಸಲ್ಪಟ್ಟಿದ್ದು, ಇದು ಅತಿ ಕಡಿಮೆ ನಾಮಪತ್ರ ಸಲ್ಲಿಸಲ್ಪಟ್ಟ ತಾಲೂಕಾಗಿದೆ ಎಂದು ಅವರು ತಿಳಿಸಿದರು.
ಒಟ್ಟು ೩೨,೬೭೭ ನಾಮಪತ್ರಗಳಲ್ಲಿ ೩೯೯೯ ಅನುಸೂಚಿತ ಜಾತಿ, ೨೨೮೧ ಅನುಸೂಚಿತ ಪಂಗಡ, ೭೭೫೩ ಹಿಂದುಳಿದ “ಅ” ವರ್ಗ, ೨೨೧೯ ಹಿಂದುಳಿದ “ಬ” ವರ್ಗ, ೧೬೪೨೫ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಸದ್ದಾರೆ.