ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸೈಕಲ್ ಜಾಥಾ ಹಾಗೂ ಕಡಲ ತೀರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಸೈಕಲ್ ಜಾಥಾ ಹಾಗೂ ಕಡಲ ತೀರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

Sat, 27 May 2023 03:38:02  Office Staff   SO News

ಕಾರವಾರ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಶ್ವ ಪರಿಸರ ದಿನಾಚರಣೆ  ಪ್ರಯುಕ್ತ ಮೇ.27 ರಿಂದ ಜೂ.05 ರ ವರೆಗೆ  ಕಾರವಾರದಿಂದ ಮಂಗಳೂರಿನವರೆಗೆ ಸೈಕಲ್ ಜಾಥಾ ಹಾಗೂ ಕಡಲ ತೀರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.

ಸೈಕಲ್ ಜಾಥಾ ಹಾಗೂ ಕಡಲ ತೀರ ಸ್ವಚ್ಛತಾ ಅಭಿಯಾನವು ಮೇ 27 ರಂದು ಕಾರವಾರ ಕಡಲ ತೀರದಲ್ಲಿ , ಮೇ. 28 ರಂದು ಗೋಕರ್ಣ ಕಡಲ ತೀರದಲ್ಲಿ, ಮೇ.29 ರಂದು ಕಾಸರಕೋಡ, ಹೊನ್ನಾವರ ಕಡಲ ತೀರದಲ್ಲಿ ಹಾಗೂ ಮೇ.30 ರಂದು ಮುರ್ಡೇಶ್ವರ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು  ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: