ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ನಾಮಪತ್ರ ಸಲ್ಲಿಕೆ ಹಾಗೂ ಜನ ಜಮಾವಣೆಯ ವಿಷಯದ ಕುರಿತಂತೆ, ಸಾಮಾಜಿಕ - ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹರಿ ಬಿಟ್ಟ ಇಬ್ಬರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಹೊನ್ನಾವರ ಮಂಕಿ ಚಿತ್ತಾರದ ನಿವಾಸಿ ಮಾರುತಿ ಗಣಪಯ್ಯ ಗೌಡ, ಭಟ್ಕಳ ಚೌಥನಿಯ ಶಂಕರ ಸಂಕಯ್ಯ ನಾಯ್ಕ ಎಂದು ಹೆಸರಿಸಲಾಗಿದೆ. ಈ ಕುರಿತು ನಾಗರಾಜ ನಾರಾಯಣ ಪಟಗಾರ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.