ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಿದ್ದಾಪುರ : ಫಾಲ್ಸ್ ನೋಡಲು ಬಂದವ ಮೃತ್ಯು.

ಸಿದ್ದಾಪುರ : ಫಾಲ್ಸ್ ನೋಡಲು ಬಂದವ ಮೃತ್ಯು.

Mon, 12 Sep 2022 04:13:50  Office Staff   SO News

ಸಿದ್ದಾಪುರ : ತಾಲ್ಲೂಕಿನ ಹುಕ್ಕಳಿ ಬಳಿಯ ಗುಂಡಿಗದ್ದೆ  ಫಾಲ್ಸ್ ನೋಡಲು ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಭಾನುವಾರ ಪತ್ತೆಯಾಗಿದೆ.

 ಸ್ಥಳೀಯರ ಸಹಕಾರದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಜಲಪಾತದಿಂದ ಮೇಲಕ್ಕೆತ್ತಿದ್ದಾರೆ.

ಮೃತ ವ್ಯಕ್ತಿಯನ್ನು ಕೋಲಾರ ಮೂಲದ ರಾಘವೇಂದ್ರ ಗೌಡ (32) ಎಂದು ಗುರುತಿಸಲಾಗಿದೆ. ತಂಡಾಗುಂಡಿ ಪಂಚಾಯಿತಿ ವ್ಯಾಪ್ತಿಯ ಹುಕ್ಕಳಿ ಬಳಿಯ ಗುಂಡಿಗದ್ದೆ ಫಾಲ್ಸ್ ಬಗ್ಗೆ ವ್ಯಕ್ತಿಯೋರ್ವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಮಾಹಿತಿ ಆಧರಿಸಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟಾಗಿ 13 ಮಂದಿ ಪ್ರವಾಸಕ್ಕೆ ಆಗಮಿಸಿದ್ದರು. ಆದರೆ ಯಾವುದೇ ಸಮರ್ಪಕ‌ ರಸ್ತೆ ಸೇರಿದಂತೆ ಸುರಕ್ಷತೆ ಬಗ್ಗೆ ತಿಳಿಯದೆ ಫಾಲ್ಸ್ ಬಳಿ ಇಳಿದಾಗ ರಾಘವೇಂದ್ರ ಆಯತಪ್ಪಿ ಬಿದ್ದು ನಾಪತ್ತೆಯಾಗಿದ್ದ. ಶನಿವಾರ ಪೊಲೀಸರು ಹುಡುಕಾಟ ನಡೆಸಿದ್ದರು ಪತ್ತೆಯಾಗಿರಲಿಲ್ಲ. ಭಾನುವಾರ ಸ್ಥಳೀಯರ ಸಹಕಾರದಲ್ಲಿ ನಿರಂತರ ಹುಡುಕಾಟ ನಡೆಸಿ ಪತ್ತೆ ಮಾಡಲಾಗಿದೆ
ಬಳಿಕ ಸ್ಥಳೀಯರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: