ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಾವನ್ನಪ್ಪಿದ ತಾಯಿಯ ಕಣ್ಣನ್ನು ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಮಗ

ಸಾವನ್ನಪ್ಪಿದ ತಾಯಿಯ ಕಣ್ಣನ್ನು ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಮಗ

Fri, 02 Sep 2022 05:51:40  Office Staff   SO NEWS

ಭಟ್ಕಳ:ಅನಾರೋಗ್ಯದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತಾಯಿಯ ಕಣ್ಣನ್ನು ನೇತ್ರಗಳನ್ನು ದಾನ ಮಾಡುವ ಮೂಲಕ ಮಗ ಸಾರ್ಥಕತೆ ಮೆರೆದಿದ್ದಾನೆ 
ನೇತ್ರದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರದ ವೃದ್ಧೆಯನ್ನು ಮಾಸ್ತಮ್ಮ ವೆಂಕಟಪ್ಪ ನಾಯ್ಕ ಶಿರಾಲಿ ಮತ್ತಿಗುಂಡಿ ನಿವಾಸಿ ( 68) ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು   ಆಗಸ್ಟ್ 21ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಾಯಿನನ್ನು ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ತಾಯಿ ಇಂದು ಸಾವನ್ನಪ್ಪಿದ್ದಾರೆ. ತಾಯಿಯ ಸಾವಿನ ಬಳಿಕ ಮತ್ತೊಬ್ಬರಿಗೆ ತನ್ನ ತಾಯಿಯ ಕಣ್ಣು ಬೆಳಕಾಗಲಿ ಎಂಬ ಉದ್ದೇಶದಿಂದ  ತನ್ನ ಕುಟುಂಬದವರ ಒಪ್ಪಿಗೆ ಪಡೆದ ಮಗ ಮಂಜುನಾಥ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದಾರೆ. 
ಮಾಹಿತಿ ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಯಗೆ ಬಂದ  ಉಡುಪಿಯ ಪ್ರಸಾದ ನೇತ್ರಾಲಯ ತಂಡ ನಿಯಮದ ಪ್ರಕಾರ ಕಣ್ಣನ್ನು ತೆಗದುಕೊಂಡು ತೆರಳಿದ್ದಾರೆ.
ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ ರಾಜ್ ಕುಮಾರ ಸಾವಿನ ನಂತರ ನೇತ್ರದಾನ ಮಾಡಿ ರಾಜ್ಯದ  ಜನತೆಗೆ ಪ್ರೇರಣೆಯಾಗಿದ್ದರು. ಅದೇ ರೀತಿ ಭಟ್ಕಳದಲ್ಲಿ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಭಟ್ಕಳವತಿಯಿಂದ ಬ್ರಹತ್ ನೇತ್ರದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡು ಭಟ್ಕಳ ಜನತೆಗೆ ಪ್ರೇರಣೆಯಾಗಿದ್ದರು. ಈ ಕಾರ್ಯಕ್ರಮದ ಬಳಿಕ ಭಟ್ಕಳದಲ್ಲಿ ಇದೆ ಮೊದಲ ಬಾರಿಗೆ ನೇತ್ರದಾನ ಮಾಡಿದ ಇತಿಹಾಸ ಸ್ರಷ್ಟಿಯಾಗಿದೆ.ಈ ಸಂದರ್ಭದಲ್ಲಿ
ಸ್ಪಂದನ ಚಾರಿಟೇಬಲ್ ಟ್ರಸ್ಟ್ ಹಾಗೂ ಸಿದ್ದಿ ವಿನಾಯಕ ಸೇವಾ ಸಮಿತಿ ನೀರಕಂಠ ಇವರು  ಸಹಕಾರ ನೀಡಿದ್ದಾರೆ. 
ಹೀಗೆ ಸತ್ತ ಬಳಿಕ ವ್ಯಕ್ತಿ ಕಣ್ಣನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಿ ಎಂಬುವುದು ನಮ್ಮ ಆಶಯವಾಗಿದೆ


Share: