ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸಕಲೇಶಪುರ: ಸಾಹಿತ್ಯಾಸಕ್ತರಿಗಾಗಿ ಎರೆಡು ದಿನಗಳ ’ಕನ್ನಡ ಕಥಾಲೋಕ’ ಕಮ್ಮಟ

ಸಕಲೇಶಪುರ: ಸಾಹಿತ್ಯಾಸಕ್ತರಿಗಾಗಿ ಎರೆಡು ದಿನಗಳ ’ಕನ್ನಡ ಕಥಾಲೋಕ’ ಕಮ್ಮಟ

Tue, 24 Nov 2009 18:36:00  Office Staff   S.O. News Service
ಸಕಲೇಶಪುರ, ನವೆಂಬರ್ 24:ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ೨೦೦೯ರ ನವೆಂಬರ್ ೨೮ ಶನಿವಾರ ಮತ್ತು ೨೯ರ ಭಾನುವಾರ ಎರಡು ದಿನಗಳಕಾಲ ಸಾಹಿತ್ಯಾಸಕ್ತರಿಗಾಗಿ ಕನ್ನಡ ಕಥಾಲೋಕ ಎಂಬ ಕಥಾಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ಗ್ರಾಮೀಣಪ್ರದೇಶವಾದ ಬೆಳ್ಳೇಕೆರೆಯ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ನಡೆಯುವ ಈ ಕಮ್ಮಟದಲ್ಲಿ ಕನ್ನಡದ ಹೆಸರಾಂತ ಸಾಹಿತಿಗಳಾದ ವ್ಯೆದೇಹಿ,ಎಸ್.ಆರ್.ವಿಜಯಶಂಕರ್.ಮುರಳೀಧರ ಉಪಾಧ್ಯ,ಕೆ.ಪಿ.ಸುರೇಶ್,ಅಬ್ದುಲ್ ರಶೀದ್,ವೆಂಕಟೇಶ್ ನಲುಕುಂಟೆ ಅವರುಗಳು ಭಾಗವಹಿಸಿ ಕಮ್ಮಟವನ್ನು ನಡೆಸಿಕೊಡಲ್ಲಿದ್ದಾರೆ. ಅಲ್ಲದೆ ಕನ್ನಡದ ಖ್ಯಾತ ಲೇಖಕಕರುಗಳಾದ ಆನಂದ ಪಾಟೀಲ್,ಜಿ.ಎಸ್. ಉಬರಡ್ಕ,ಸುಮಾ‌ಎಂಬಾರ್,ಮಹದೇವಹಡಪದ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಮ್ಮಟದಲ್ಲಿ ಎರಡು ದಿನಗಳ ಕಾಲ ಸಣ್ಣಕತೆಗಳ ಬಗ್ಗೆ ವಿಚಾರವಿಮರ್ಶೆ,ಸಂವಾದ,ರಚನಾವಿಧಾನಗಳ ಬಗ್ಗೆ ಮಾಹಿತಿ ವಿನಿಮಯ ,ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲದೆ ಹೊರಗಿನಿಂದಲು ಆಗಮಿಸುವ ಸಣ್ಣಕತೆಗಾರರು,ಸಾಹಿತ್ಯಾಸಕ್ತರು,ವಿದ್ಯಾರ್ಥಿಗಳು,ಕಲಾವಿದರುಗಳು ಸೇರಿ ಮೂವತ್ತು ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ ಕಮ್ಮಟವು ನವೆಂಬರ್ ೨೮ರಂದು ಬೆಳಗ್ಗೆ ೧೦ ಗಂಟೆಗೆ ಆರಂಭವಾಗಲಿದ್ದು ಜಿಲ್ಲಾ ಕಸಾಪ ಅಧ್ಯಕ್ಷ ಉದಯರವಿ ಉದ್ಘಾಟಿಸಲಿದ್ದಾರೆ ನವೆಂಬರ್ ೨೯ ರಂದು ಮಧ್ಯಾಹ್ನ ೩ಘಂಟೆಗೆ  ಶಿಬಿರದ ಸಮಾರೋಪ ಸಮಾರಂಭನಡೆಯಲ್ಲಿದ್ದು,ಶಾಸಕ ಎಚ್.ಕೆ ಕುಮಾರಸ್ವಾಮಿ, ಮಾಜಿ ಶಾಸಕ ಎಚ್.ಎಮ್.ವಿಶ್ವನಾಥ್ ಹಾಗು ಜನಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ. 

ಸಾಹಿತ್ಯಾಸಕ್ತರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ತಾಲ್ಲೂಕು ಕಸಾಪ ಅಧ್ಯಕ್ಷ ಪ್ರಸಾದ್ ರಕ್ಷಿದಿ ಹಾಗು ಕಾರ್ಯದರ್ಶಿ ಜ್ಯೆ ಭೀಮ್‌ಮಂಜು ತಿಳಿಸಿದ್ದಾರೆ.    


Share: