ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ತುಮಕೂರು ನಗರಸಭೆ ಮಹಾನಗರಪಾಲಿಕೆಯಾಗಿ ಪರಿವರ್ತನೆ

ಬೆಂಗಳೂರು: ತುಮಕೂರು ನಗರಸಭೆ ಮಹಾನಗರಪಾಲಿಕೆಯಾಗಿ ಪರಿವರ್ತನೆ

Wed, 27 Jan 2010 18:30:00  Office Staff   S.O. News Service
ಬೆಂಗಳೂರು, ಜನವರಿ 27:  ಬಹುನಿರೀಕ್ಷಿತ ತುಮಕೂರು ನಗರ ಸಭೆ ಮಾಹಾನಗರ ಪಾಲಿಕೆಯಾಗಿ ಪರಿವರ್ತಿಸುವ ಕುರಿತಾದ ಸರ್ಕಾರದ ತೀರ್ಮಾನ ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. 

ಜನವರಿ ೨೫ ರಂದು ರಾಜ್ಯಪತ್ರದಲ್ಲಿ ಇದು ಪ್ರಕಟವಾಗಿದ್ದು, ಅಂದಿನಿಂದ ಹಿಡಿದು ೩೦ ದಿನಗಳ ಅವಧಿಯನ್ನು ಸರ್ಕಾರ ನಿಗದಿಪಡಿಸಿದೆ. ಆಕ್ಷೇಪಣೆಗಳು, ಸಲಹೆ ಸೂಚನೆಗಳನ್ನು ಆಯುಕ್ತರು ಮತ್ತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ೯ ನೇ ಮಹಡಿ, ವಿ.ವಿ. ಗೋಪುರ, ಡಾ: ಅಂಬೇಡ್ಕರ್ ವೀದಿ ಇಲ್ಲಿಗೆ ಸಲ್ಲಿಸಬಹುದಾಗಿದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ೨೨ ಗ್ರಾಮಗಳು ಸೇರ್ಪಡೆಯಾಗಿದ್ದು, ದಿಬ್ಬೂರು, ತುಮಕೂರು ಎ.ಕೆ. ಹೊನ್ನೇನಹಳ್ಳಿ, ಮರಳೇನ ಹಳ್ಳಿ, ಲಿಂಗಾಪುರ, ರಾಮಪುರ, ಅಂತರಸನ ಹಳ್ಳಿ, ಸತ್ಯಮಂಗಲ, ತುಮಕೂರು ಕಸಬ, ದೇವರಾಯನಪಟ್ಟಣ, ಬಡವಾಡಿ, Pತ್ಸಂದ್ರ, ಬಡ್ಡಿಹಳ್ಳಿ, ಶೆಟ್ಟಿಹಳ್ಳಿ, ಗೆದ್ದಲ ಹಳ್ಳಿ, ಮರಳೂರು, ಉಪ್ಪಾರ ಹಳ್ಳಿ, ವೀರಸಾಗರ, ಮಳೇಕೋಟೆ, ಭೀಮಸಂದ್ರ, ಚಿನ್ನದಿಣ್ಣೆ ಮತ್ತು ಗಂಗಸಂದ್ರ ಗ್ರಾಮಗಳು ಸೇರ್ಪಡೆಯಾಗಿವೆ. 




Share: