ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರು ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸ್ತರಗಳ ಅಧಿಕಾರಿಗಳೊಂದಿಗೆ ನಡೆಸಿದ ಇ ಲಾಖಾ ಪ್ರಗತಿ ಪರಿಶೀಲನಾ ಸಭೆಯ ಕೊನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಪದವಿ ಪೂರ್ವ ಕಾಲೇಜುಗಳಲ್ಲಿ ಈಗ ಖಾಲಿ ಇರುವ ೨,೫೦೦ ಶಿಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದೀಗ ವಿಜ್ಞಾನ ವಿಭಾಗದ ಕೌನ್ಸೆಲಿಂಗ್‌ನೊಂದಿಗೆ ಇನ್ನೊಂದು ವಾರದೊಳಗೆ ಎಲ್ಲ ಹುದ್ದೆಗಳನ್ನು ತುಂಬಿಸಲಾಗುವುದು ಎಂದರು.
ಪ್ರೌಢ ಶಾಲೆಗಳಲ್ಲಿ ೨,೫೦೦ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ೩,೦೦೦ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ೫೮ರಿಂದ ೬೦ಕ್ಕೇರಿಸಿರುವುದರಿಂ ದ ಕಳೆದೆರಡು ವರ್ಷಗಳಿಂದ ಯಾರೂ ನಿವೃತ್ತಿಯಾಗುತ್ತಿಲ್ಲ. ಆದರೆ ಮುಂದಿನ ಅಕ್ಟೋಬ ರ್‌ನಿಂದ ಶಿಕ್ಷಕರ ನಿವೃತ್ತಿ ಆರಂಭಗೊಳ್ಳಲಿದ್ದು, ಇಂಥವರನ್ನು ಗುರುತಿಸಿ ಆ ಹುದ್ದೆಗೆ ಮೊದಲೇ ನೇಮಕಗೊಳಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುವುದು ಎಂದು ಸಚಿ ವರು ನುಡಿದರು.
ರಾಜ್ಯದಲ್ಲಿ ೭೦,೦೦೦ ಶಾಲೆಗಳಿದ್ದು, ಇವುಗಳಲ್ಲಿರುವ ೨.೭೫ ಲಕ್ಷ ಶಿಕ್ಷಕರು ೧.೧೦ ಕೋ ಟಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದೇವೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ೨೦೦೬ರಿಂದ ಖಾಲಿ ಇರುವ ೧,೧೦೦ ಶಿಕ್ಷಕ ಹುದ್ದೆಗಳನ್ನು ತುಂಬಲು ಸರಕಾರ ಅನುಮತಿ ನೀಡಿದೆ. ೨೦೦೭-೨೦೦೮ರ ಅವಧಿಯಲ್ಲಿ ಖಾಲಿ ಇರುವ ಖಾಸಗಿ ಶಾಲೆಗಳ ೨,೫೦೦ ಹುದ್ದೆಗಳಲ್ಲಿ ೧,೦೦೦ ಹುದ್ದೆಗಳನ್ನು ತುಂಬಲು ಈಗ ಅನು ಮತಿ ನೀಡಿದ್ದು, ಉಳಿದಿರುವ ೧,೫೦೦ ಹುದ್ದೆಗಳನ್ನು ತುಂಬಲು ಮುಂದಿನ ವರ್ಷ ಅನು ಮತಿ ನೀಡಲಾಗುವುದು ಎಂದರು.
1,6000 ಕೋಟಿ ರೂ. ನಷ್ಟ: ಅಕ್ಟೋಬರ್ ತಿ೦ಗಳ ಮೊದಲ ವಾರದಲ್ಲಿ ರಾಜ್ಯದಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಶಿಕ್ಷಣ ಇಲಾಖೆಗೆ ಒಟ್ಟು ೧,೬೦೦ ಕೋಟಿ ರೂ. ನಷ್ಟ ಸಂಭವಿಸಿದ ಅಂದಾಜು ಮಾಡಲಾಗಿದೆ. ಇದನ್ನು ಸರಿಪಡಿಸಲು ಸೂಕ್ತ ಕ್ರಮ ಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕಾಗೇರಿ ನುಡಿದರು.
ಈ ಬಾರಿಯ ಮಳೆಗಾಲದ ಗಾಳಿ-ಮಳೆಗೆ ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಟ್ಟು ೨೪ ಲಕ್ಷ ರೂ.ನಷ್ಟ ಸಂಭವಿಸಿದ್ದು, ಇದನ್ನು ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಹಾನಿಗೊಳಗಾದ ಶಾಲೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ೮೦ ಹುದ್ದೆಗಳು ಖಾಲಿ ಇದ್ದು, ಅವುಗಳ ಲ್ಲಿ ೬೫ ಗೌರವ ಶಿಕ್ಷಕರು ದುಡಿಯುತ್ತಿದ್ದಾರೆ. ಈ ೬೫ ಹುದ್ದೆಗಳನ್ನು ತುಂಬಲು ಕ್ರಮ ತೆಗೆ ದುಕೊಳ್ಳಲಾಗಿದೆ. ಈ ಮೂಲಕ ಎಲ್ಲ ಹುದ್ದೆಗಳನ್ನು ತುಂಬಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಂಗೀತ, ದೈಹಿಕ, ಚಿತ್ರಕಲೆ ಸೇರಿದಂತೆ ವಿವಿಧ ಕಲೆಗಳಲ್ಲಿ ಪರಿಣಿತ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ರಘುಪತಿ ಭಟ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರಸನ್ನ ಕುಮಾರ್, ಉಪವಿಭಾಗಾಧಿಕಾರಿ ರಮೇಶ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮತ್ತೆ ಬದಲಾವಣೆ
ಈ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿಯ ಪಬ್ಲಿಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಮಾದರಿ ಯನ್ನು ಬದಲಾಯಿಸಲಾಗಿದೆ. ಈ ಹಿಂದೆ ಇದ್ದ ೬೦ ಮಾರ್ಕಿನ ಸರಿಯಾದ ಉತ್ತರಗಳ ಬಹು ಆಯ್ಕೆ ಮಾದರಿಯನ್ನು ಕೈಬಿಟ್ಟು, ೭೫ ಮಾರ್ಕಿನ ೧,೨,೫,೧೦ ಮಾರ್ಕುಗಳ ಉತ್ತ ರ ಬರೆಯುವ ಈ ಹಿಂದಿದ್ದ ಮಾದರಿಯನ್ನು ಮತ್ತೆ ಜಾರಿಗೆ ತರಲಾಗಿದೆ ಎಂದು ವಿಶ್ವೇಶ್ವ ರ ಹೆಗಡೆ ತಿಳಿಸಿದ್ದಾರೆ.
ಈ ಹಿಂದಿನ ೬೦ ಮಾರ್ಕುಗಳ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆ ಯಿಂದ ವಿದ್ಯಾರ್ಥಿಗ ಳ ನಿಜವಾದ ಪ್ರತಿಭೆ ಹೊರಬರದೇ, ಪ್ರಯತ್ನ ಪಡದ ವಿದ್ಯಾರ್ಥಿಗಳೂ ಅದೃಷ್ಟದ ಬೆಂಬ ಲದಿಂದ ಹೆಚ್ಚಿನ ಮಾರ್ಕ್ ಪಡೆಯುವ ಬಗ್ಗೆ ಶಿಕ್ಷಣ ತಜ್ಞರು ಗಮನ ಸೆಳೆದಿದ್ದರು. ಇದರಿಂ ದ ಶಿಕ್ಷಣದ ಗುಣಮಟ್ಟವೂ ಕುಂಠಿತಗೊಂಡಿತ್ತು ಎಂದು ಟೀಕೆಯನ್ನು ಎದುರಿಸಬೇಕಾಯಿ ತು ಎಂದವರು ಹೇಳಿದರು. ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆ ಬಗ್ಗೆ ಈಗಾಗಲೇ ಎಲ್ಲ ಶಾಲೆಗಳಿಗೂ ಡಿಡಿಪಿಐ ಕಚೇರಿ ಮೂಲಕ ಸೂಚನೆ ಹೋಗಿದೆ ಎಂದವರು ತಿಳಿಸಿದರು.
ನಿಮ್ಮ ಅಪೇಕ್ಷೆಗೆ ತಕ್ಕ೦ತೆ ಮಗುವನ್ನು ತಿದ್ದ ಬೇಡಿ;ಪ್ರತಿಭೆ ಗುರುತಿಸಿ ಪ್ರೋ ತ್ಸಾಹಿಸಿ
ಬ್ರಹ್ಮಾವರ, ಅ.೨೬: ಮಗುವನ್ನು ನಿಮ್ಮ ಅಪೇಕ್ಷೆಗೆ ತಕ್ಕಂತೆ ತಿದ್ದದೆ, ಅದರ ಪ್ರತಿಭೆ, ಆಸ ಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ. ಇದರಿಂದ ಸಶಕ್ತ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಕ್ಕ ಳ ಹೆತ್ತವರಿಗೆ ಕಿವಿಮಾತು ಹೇಳಿದ್ದಾರೆ.
ಅವರು ಇಲ್ಲಿಗೆ ಸಮೀಪದ ಕುಂಜಾಲಿನ ವಿ.ಕೆ.ಆರ್.ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ರಜತ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ಬ್ರಹ್ಮಾವರ ವಲಯ ಮಟ್ಟದ `ಪ್ರತಿಭಾ ಕಾರಂಜಿ-೨೦೦೯' ಸ್ಪರ್ಧೆಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳ ಆಸಕ್ತಿ, ಗುಣ, ಸ್ವಭಾವ, ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆಯುವ ಕೆಲಸ ಮಾಡಿ. ಆಗ ಆತ ನಿಮಗೆ, ದೇಶಕ್ಕೆ ಒಂದು ಆಸ್ತಿಯಾಗುತ್ತಾನೆ. ಅದೇ ನಿಮ್ಮ ಅಪೇಕ್ಷೆಗೆ ತಕ್ಕಂತೆ ಆತ ಐಟಿ, ಬಿಟಿ ಕ್ಷೇತ್ರವನ್ನೇ ನೆಚ್ಚಿಕೊಂಡರೆ ನಿಮಗೆ ಇಳಿಗಾಲದಲ್ಲಿ ವೃದ್ದಾಶ್ರಮ ವೇ ಗತಿಯಾಗುತ್ತದೆ ಎಂದು ಕಾಗೇರಿ ಎಚ್ಚರಿಸಿದರು.
ಕುಂಜಾಲು ಪ್ರೌಢ ಶಾಲೆಯನ್ನು ಸರಕಾರ ವಹಿಸಿಕೊಳ್ಳುವ ಬೇಡಿಕೆಯ ಕುರಿತು ಸ್ಪಂದಿ ಸಿದ ಸಚಿವರು, ಸರಕಾರ ಇಂಥ ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸದಾ ಸಿದ್ದವಿದೆ. ಆದರೆ ಜನರೂ ಇದರಲ್ಲಿ ಸಹಭಾಗಿಗಳಾಗಿ ಇದನ್ನು ಮಾದರಿ ಶಾಲೆಯಾಗಿ ಸಲು ಶ್ರಮಿಸಬೇಕು ಎಂದು ಹೇಳಿದರು.
ರಜತೋತ್ಸವ ಸಂದರ್ಭದಲ್ಲಿ ಶಾಲೆಗೆ ನೂತನ ಕಟ್ಟಡಗಳನ್ನು ನಿರ್ಮಿಸಿಕೊಟ್ಟ ದಾನಿಗ ಳಾದ ಹಳೆವಿದ್ಯಾರ್ಥಿ ದುಬೈಯ ಡಾ.ಬಿ.ಕೆ.ಯೂಸುಫ್ ಹಾಗೂ ಉದ್ಯಾವರದ ಹಲೀಮಾ ಸಾಬ್ಜು ಟ್ರಸ್ಟ್‌ನ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಸಾಹೇಬ್‌ರನ್ನು ಸಚಿವರು ಶಾಲು ಹೊದಿಸಿ ಸನ್ಮಾನಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿ ಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಸದಸ್ಯ ಬಿ.ಭುಜಂಗ ಶೆಟ್ಟಿ, ಮುಂಬ ಯಿ ಉದ್ಯಮಿ ನಾಗೇಂದ್ರ ಆಚಾರ್ಯ, ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಡಾ.ಬಿ. ಕೆ. ಯೂಸುಫ್, ಶಾಲೆಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ವಿಠಲದಾಸ ಕಿಣಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗಣೇಶ ಪೈ ಉಪಸ್ಥಿತರಿದ್ದರು.
ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ವಸಂತ ಶೆಟ್ಟಿ ಸ್ವಾಗತಿಸಿದರು. ಶಾಲೆಯ ಮು ಖ್ಯೋಪಾಧ್ಯಾಯ ಬಿ.ಸಂತೋಷ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕ ಬಿ.ಬಾಲಗಂಗಾಧರ ಶೆಟ್ಟಿ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು.