ವಿಟ್ಲ, ಜನವರಿ 12: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪುತ್ತೂರು ಜಿಲ್ಲಾ ವತಿಯಿಂದ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಮಂಗಳೂರು, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಹಾಗೂ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವುಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರವು ದಿನಾಂಕ ೧೦/೦೧/೨೦೧೦ ರಂದು ವಿಟ್ಲದ ವಿಠಲ ಬಾಲಿಕಾ ಪ್ರೌಢ ಶಾಲೆಯಲ್ಲಿ ಜರುಗಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ಹಿದಾಯಿ ಫೌಂಡೇಶನ್‌ನಸಂಚಾಲಕರಾದ ಹಾಜಿ ಮುಹಮ್ಮದ್ ಹನೀಫ್, ಗೋಳ್ತಮಜಲು ಇವರು ಪಾಪ್ಯುಲರ್ ಫ್ರಂಟ್ ಆಫ್
ಇಂಡಿಯಾ ಸಂಘಟನೆಯ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಶಂಸೆಗಳನ್ನು ವ್ಯಕ್ತಪಡಿಸಿ, ಪವಿತ್ರ ಕುರ್‌ಆನ್‌ನ ಸೂಕ್ತದ ಮೂಲಕ ಉದ್ಘಾಟಿಸಿದರು. ಮುಖ್ಯ ಅಥಿತಿಯಾಗಿ ಮಾತನಾಡಿದ ಶ್ರೀ ರಾಮಚಂದ್ರ ಭಟ್, ಮೆಡಿಕಲ್ ಅಫೀಸರ್, ರೋಟೈ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವರು ಮಾತನಾಡಿ ಪಿ.ಯಫ್.ಐ ಯ ಸಮಯ ಪಾಲನೆ, ಶಿಸ್ತು ಹಾಗೂ ರಕ್ತದಾನ ಕಾರ್ಯಕ್ರಮಗಳ ಬಗ್ಗೆ ತನ್ನ ಸ್ವ-ಅನುಭವವನ್ನು ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪುತ್ತೂರು ಜಿಲ್ಲಾಧ್ಯಕ್ಷರಾದ ಹೈದರ್ ನೀರ್‌ಸಾಲ್ ರವರು ಮಾತನಾಡಿ ಪಿ.ಯಫ್.ಐ ಯು ಸಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೋಮುವಾದಿ ಸಂಘಟನೆ ಎಂಬ ಆರೋಪವನ್ನು ತಳ್ಳಿಹಾಕಿದರು. "ದಾನವು ವಿಪತ್ತನ್ನು ತಡೆಯುವುದು" ಎಂಬ ಪವಿತ್ರ ಕುರ್‌ಆನ್‌ನ ಸೂಕ್ತವನ್ನು ವಿವರಿಸುತ್ತಾ, ಪಿ.ಯಫ್.ಐ ಯ ಸದಸ್ಯರ, ಅಭಿಮಾನಿಗಳ ಮಹತ್ವದ ರಕ್ತದಾನವು ಪ್ರಸಕ್ತ ಜಾತಿ ವೈಷಮ್ಯವನ್ನು ತಡೆಯಲು ಹೇತುವಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಸೋಷಿಯಲ್ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಕೆ.ಎಂ.ಸಿ
ಬ್ಲಡ್ ಬ್ಯಾಂಕ್ ಮೆಡಿಕಲ್ ಅಫೀಸರ್ ಶ್ರೀ ಜೀತ್ ಹಾಗೂ ವಲಯ ಮಟ್ಟದ ಪದಾಧಿಕಾರಿಗಳುಉಪಸ್ಥಿತರಿದ್ದರು. ಪಿ.ಯಫ್.ಐ ಪುತ್ತೂರು ಜಿಲ್ಲಾ ಕರ್ಯದರ್ಶಿ ಟಿ.ಎಸ್ ಹನೀಫ್ ಸ್ವಾಗತಿಸಿ, ವಿಟ್ಲ ವಲಯ ಸದಸ್ಯ ಖಲಂದರ್ ಪರ್ತಿಪ್ಪಾ ಡಿ ಧನ್ಯವಾದ ಸಲ್ಲಿಸಿದರು ಹಾಗೂ ಶಾಫಿ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ನಂತರ ಹೈದರ್ ನೀರ್‌ಸಾಲ್ ರವರ ರಕ್ತದಾನದ ಮೂಲಕ ಚಾಲನೆಗೊಂಡಈ ಬ್ರಹತ್ ಶಿಬಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದು, ಪಿ.ಯಫ್.ಐ ಯ ಸದಸ್ಯರು ಮತ್ತು ಅಭಿಮಾನಿಗಳು ಕೂಡಿ ೧೧೮ ಯುನಿಟ್ ಗಳಷ್ಟು ರಕ್ತವನ್ನು ದಾನಮಾಡಿ ಕಾರ್ಯಕ್ರಮವನ್ನು ವಿಜಯಗೊಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಮಚಂದ್ರ ಭಟ್, ಪಿ.ಯಫ್.ಐ ಯು ಮಾತಿನಲ್ಲಿ ಹೇಳಿದ್ದನ್ನು ಕಾರ್ಯವಾಗಿ ತೋರಿಸುವ ಸಂಘಟನೆ ಎಂಬ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಉತ್ತಮವಾಗಿ ನಡೆದ ಈ ಕಾರ್ಯಕ್ರಮವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.