ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಪು: ಲಾರಿಗೆ ಕಾರು ಢಿಕ್ಕಿ - ಹರ್ಷ ಸಂಸ್ಥೆಯ ವ್ಯವಸ್ಥಾಪಕರ ದುರ್ಮರಣ

ಕಾಪು: ಲಾರಿಗೆ ಕಾರು ಢಿಕ್ಕಿ - ಹರ್ಷ ಸಂಸ್ಥೆಯ ವ್ಯವಸ್ಥಾಪಕರ ದುರ್ಮರಣ

Tue, 06 Oct 2009 03:03:00  Office Staff   S.O. News Service
ಕಾಪು, ಅ.೫: ಇಲ್ಲಿನ ಕಟಪಾಡಿ ಸಮೀಪದ ಕಲ್ಲಾಪು ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ರವಿವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ  ಸಂಭವಿಸಿದ ಅಪಘಾತದಲ್ಲಿ ಹರ್ಷ ಸಂಸ್ಥೆಯ ಮಂಗಳೂರು ಶೋರೂಂನ ಮೆನೇಜರ್ ಶ್ರೀನಾಥ್(೩೬) ಎಂಬವರು ಮೃತಪಟ್ಟಿದ್ದಾರೆ.

ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವಿ‌ಆರ್‌ಎಲ್ ಬಸ್ ಎದುರಿನಲ್ಲಿ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಂಬಲಪಾಡಿಯ ನಿವಾಸಿಯಾಗಿರುವ ಶ್ರೀನಾಥ್ ಮಂಗಳೂರಿನ ಹರ್ಷ ಸಂಸ್ಥೆಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟಣೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಪ್ರತಿದಿನದಂತೆ ಶ್ರೀನಾಥ್ ಮಂಗಳೂರಿನ ಹರ್ಷ ಮಳಿಗೆಯನ್ನು ಮುಚ್ಚಿ ತಾನೇ ಕಾರನ್ನು ಚಲಾಯಿಸಿಕೊಂಡು ಅಂಬಲಪಾಡಿಯಲ್ಲಿರುವ ಮನೆಗೆ ಹಿಂದಿರುಗುತ್ತಿದ್ದ ವೇಳೆ  ನಡೆದ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಿವಾಹಿತರಾಗಿರುವ ಇವರು ಹರ್ಷ ಸಂಸ್ಥೆಯ ಮಾಲಕ ದಿ.ಬೋಳ ಪೂಜಾರಿಯವರ ಮೊಮ್ಮಗ. ಮೃತರು ತಂದೆ, ತಾಯಿ, ತಮ್ಮನನ್ನು ಅಗಲಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share: