ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಭುವನೇಶ್ವರ: ಒರಿಸ್ಸಾ ರಾಜ್ಯಕ್ಕೆ ’ಒರಿಶಾ’ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

ಭುವನೇಶ್ವರ: ಒರಿಸ್ಸಾ ರಾಜ್ಯಕ್ಕೆ ’ಒರಿಶಾ’ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

Sat, 24 Oct 2009 14:25:00  Office Staff   S.O. News Service
ಭುವನೇಶ್ವರ್: ಒರಿಸ್ಸಾ ರಾಜ್ಯದ ಹೆಸರನ್ನು ’ಒರಿಶಾ’ ಎಂದು ಬದಲಾಯಿಸಲು ಒರಿಸ್ಸಾ ರಾಜ್ಯ ಸಲ್ಲಿಸಿದ್ದ ಮನವಿಗೆ ಕೇಂದ್ರ ಸಮ್ಮತಿ ಸೂಚಿಸಿದೆ. ಕೇಂದ್ರದ ಒಪ್ಪಿಗೆಗೆನ ಒರಿಸ್ಸಾದ ಜನತೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಆಡಳಿತಾರೂಢ ಬಿಜು ಜನತಾದಳದ ಕಾರ್ಯದರ್ಶಿ ಹಾಗೂ ಒರಿಸ್ಸಾ ಸರ್ಕಾರದ ಕೃಷಿ ಮಂತ್ರಿ ’ಇದು ನಮ್ಮ ದೀರ್ಘ ಕಾಲದ ಬೇಡಿಕೆಯಾಗಿದ್ದು, ಒರಿಸ್ಸಾದಲ್ಲಿ ತಪ್ಪಾಗಿ  ಉಚ್ಚರಿಸಲಾಗುತ್ತಿರುವ ಹಲವಾರು ಸ್ಥಳಗಳ ಹೆಸರು ಬದಲಿಸಬೇಕಿದೆ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಒರಿಸ್ಸಾದ ಉತ್ಕಲ್ ಸಮ್ಮಿಳಿನಿ ಸಂಸ್ಥೆ ಸ್ವಾಗತಿಸಿದೆ. ಒರಿಸ್ಸಾದಲ್ಲಿ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯ ಅಧ್ಯಕ್ಷೆ ಬಸಂತಾ ಪಾಣಿಗ್ರಹಿ ಈ ಬಗ್ಗೆ ಪ್ರತಿಕ್ರಯಿಸಿ ’ಕೇಂದ್ರದ ಈ ನಡೆಯನ್ನು ನಾವು ಸ್ವಾಗತಿಸಿದ್ದೇವೆ. ಬಹು ಹಿಂದಿನಿಂದಲೂ ಈ ಬೇಡಿಕೆಯನ್ನು ನಾವು ಕೇಂದ್ರದ ಬಳಿ ಕೇಳುತ್ತಾ ಬಂದಿದ್ದೆವು’ ಎಂದು ತಿಳಿಸಿದ್ದಾರೆ. 

ಕಾಲೇಜು ವಿದ್ಯಾರ್ಥಿ ಸುಧಾಕರ್ ಸಂಪತಿ ಮಾತನಾಡಿ, ’ಇದೊಂದು ಸ್ವಾಗತಾರ್ಹ ನಿಲುವಾಗಿದ್ದು,  ಕನಿಷ್ಟ ಇದರಿಂದ ನಾವು ನಮ್ಮ ರಾಜ್ಯದ ಹೆಸರನ್ನು ಸರಿಯಾಗಿ ಸಂಬೋಧಿಸಲು ಸಹಾಯವಾಗುತ್ತದೆ’ ಎಂದು ತಿಳಿಸಿದರು.

ಸೌಜನ್ಯ: ಕನ್ನಡಪ್ರಭ. 

Share: