ಉಡುಪಿ: ಡಿ.೨೫. ಸಮಾಜಿಕ ನೆಲೆಯಲ್ಲಿ ಪ್ರಜೆಗಳ ಮೇಲೆ ಜರಗುತ್ತಿರುವ ದೌರ್ಜನ್ಯಗಳು, ಅಧಿ ಕಾರ ಬಲದಿಂದ ಸಾಮಾನ್ಯ ಮನುಷ್ಯನ ಜೀವನ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವುದು, ಶೋಷಣೆಗೊಳಪಡಿಸುವುದು, ಮುಂತಾದ ವ್ಯವಸ್ಥೆಯ ವಿರುದ್ಧ ತೋಳ್ಬಲದಿಂದ ಚಾಟಿಯೇಟಿ ನಿಂದ ಜನ ಸಾಮಾನ್ಯರಿಗೆ ಹೋರಾಡಲು ಅಸಾಧ್ಯವಾದಂತಹ ಪ್ರಸಕ್ತ ಸಂಧರ್ಬದಲ್ಲಿ ತನ್ನ ವಿಚಾರವನ್ನು ಲೇಖನಿಯ ಮೂಲಕ ಪ್ರಕಟಿಸಿ ಜನರಲ್ಲಿ ಜಾಗೃತಿಯನ್ನುಂಡುಮಾಡಲು ಸದಾ ಶ್ರಮಿಸುತ್ತಿರುವ ಯುವ ಬರಹಗಾರ ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕರಾದ ಅಬ್ದುಲ್ ಖಾದರ್ ಕುಕ್ಕಿಲರವರ ಸಂಪಾದನಾ ಕೃತಿ `ಚಾಟಿಯೇಟು' ಮೌಲಾನ ಅಬ್ದುಲ್ ರಹೀಮ್ ಸಿರಾನಿ ಯವರ ಹಸ್ತದಿಂದ ಉಡುಪಿ ಜಾಮಿಯಾ ಮಸೀದಿಯಲ್ಲಿ ಬಿಡುಗಡೆಗೊಂಡಿದೆ.


ಪ್ರಾಸ್ತಾವಿಕವಾಗಿ ನಾಕ್ವ ಅಲಿ ಸಾಹಬ್ (ಬಾಪು ಸಾಹಬ್) ಮಲ್ಪೆ ಮಾತಾಡಿದರು. ಹೆಚ್.ಆರ್. ಎಸ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಮುಹಮ್ಮದ್ ಮರಕಡ, ಯಾಸೀನ್ ಉಡುಪಿ, ಆಸಿಫ್ ದಸ್ತಗಿರಿ ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಮರ್ಕಡ