ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶೌರ್ಯ ಪ್ರಶಸ್ತಿಗೆ ಬಾಜನರಾದ ಭಟ್ಕಳ ಅರಣ್ಯ ಇಲಾಖೆಯ ವಾಹನ ಚಾಲಕ ಪಿ.ಶೇಷು

ಶೌರ್ಯ ಪ್ರಶಸ್ತಿಗೆ ಬಾಜನರಾದ ಭಟ್ಕಳ ಅರಣ್ಯ ಇಲಾಖೆಯ ವಾಹನ ಚಾಲಕ ಪಿ.ಶೇಷು

Fri, 13 Sep 2024 21:54:31  Office Staff   SOnews

 

ಭಟ್ಕಳ: ಭಟ್ಕಳ ಅರಣ್ಯ ಇಲಾಖೆಯಲ್ಲಿ ಕಳೆದ ೩೩ ವರ್ಷಗಳಿಂದ  ಹಿರಿಯ ಚಾಲಕನಾಗಿ  ಸೇವೆ ಸಲ್ಲಿಸುತ್ತಿರುವ   ಪಿ. ಶೇಷು ಅವರಿಗೆ ಅರಣ್ಯ  ಇಲಾಖೆಯಿಂದ ನೀಡುವ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಶೌರ್ಯ ಪ್ರಶಸ್ತಿಯನ್ನು  ನೀಡಿದರು.  ರಾಜ್ಯ  ಅರಣ್ಯ ಇಲಾಖೆಯಲ್ಲಿ ಅಪ್ರತಿಮ ಸೇವೆ  ಮತ್ತು ಗಣನೀಯ ಸೇವೆ ಸಲ್ಲಿಸಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.  ಈ ಸಂದರ್ಭದಲ್ಲಿ  ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಹಾಗೂ ಉನ್ನತ ಅದಿಕಾರಿಗಳು ಉಪಸ್ಥಿತರಿದ್ದರು.  ಶೌರ್ಯ ಪ್ರಶಶ್ತ ಪಡೆದ ಪಿ. ಶೇಷು ಅವರಿಗೆ ಭಟ್ಕಳದ ಹಲವು ಸಂಘ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.


 


Share: