ಶಿರಸಿ : ಕುಮಟಾ ಶಿರಸಿ ಸಂಪರ್ಕಿಸುವ ಹಿಪನಳ್ಳಿ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ.
ವಿಶ್ವನಾಥ ಗಜಾನನ ಹೆಗಡೆ (53) ಮೃತ ಸವಾರ ಎಂದು ಗುರುತಿಸಲಾಗಿದೆ. ಅಪಘಾತಪಡಿಸಿದ ಖಾಸಗಿ ಬಸ್ ಸ್ಥಳದಿಂದ ಪರಾರಿಯಾಗಿತ್ತು. ಕುಮಟಾದ ಕತಗಾಲ್ ಬಳಿ ಬಸ್ ಚಾಲಕನನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಓರ್ವ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.