ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರಸಿಯಲ್ಲಿ ಅಬಕಾರಿ ಇಲಾಖೆಯಿಂದ ಅಕ್ರಮ ಸ್ಪಿರಿಟ್ ವಶಕ್ಕೆ.

ಶಿರಸಿಯಲ್ಲಿ ಅಬಕಾರಿ ಇಲಾಖೆಯಿಂದ ಅಕ್ರಮ ಸ್ಪಿರಿಟ್ ವಶಕ್ಕೆ.

Thu, 30 Jun 2022 04:13:40  Office Staff   SO News

ಶಿರಸಿ : ಯಲ್ಲಾಪುರ-ಶಿರಸಿ ಮಾರ್ಗದ ಭೈರುಂಭೆ ಬಳಿ ಲಾರಿ ಯಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಲಾರಿಯನ್ನ ಅಬಕಾರಿ ಅಧಿಕಾರಿ ಸಿಬ್ಬಂದಿಗಳ ವಶಪಡಿಸಿಕೊಂಡಿದ್ದಾರೆ.

 ಕೇರಳ ಮೂಲದ ಚಾಲಕ ಮುಹಮ್ಮದ ನಿಟ್ಟೂಕರನ್ (41) ಎಂಬಾತನನ್ನ ಬಂಧಿಸಲಾಗಿದೆ. ಗೋವಾದಿಂದ ಕೇರಳ ಕಡೆ ಲಾರಿಯಲ್ಲಿ ಮದ್ಯ ಸಾಗಿಸಲಾಗುತಿತ್ತು. ಒಟ್ಟು 5250 ಲೀ. ರೆಕ್ವಿಪೈಡ್ ಸ್ಪಿರಿಟ್‌ ವಶಕ್ಕೆ ಪಡೆಯಲಾಗಿದೆ.

ಸುಮಾರು ಕೋಟಿ ರೂ. ಮೌಲ್ಯದ ಮದ್ಯ ಮತ್ತು 10 ಲಕ್ಷ ರೂ. ಮೌಲ್ಯದ ಲಾರಿ ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ‌.

ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ನೇತೃತ್ವದಲ್ಲಿ ದಾಳಿ ನಡೆದಿತ್ತು.


Share: