ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ರಾಷ್ಟ್ರೀಯ ಹೆದ್ದಾರಿ 17 ಚತುಷ್ಪಥ - ಯೋಜನೆಯ ವೆಚ್ಚ ಪ್ರತಿ ಕಿ.ಮೀ.ಗೆ ಸುಮಾರು ಹನ್ನೊಂದರಿಂದ ಹದಿನೈದು ಕೋಟಿ ರೂಪಾಯಿ

ಕಾರವಾರ: ರಾಷ್ಟ್ರೀಯ ಹೆದ್ದಾರಿ 17 ಚತುಷ್ಪಥ - ಯೋಜನೆಯ ವೆಚ್ಚ ಪ್ರತಿ ಕಿ.ಮೀ.ಗೆ ಸುಮಾರು ಹನ್ನೊಂದರಿಂದ ಹದಿನೈದು ಕೋಟಿ ರೂಪಾಯಿ

Fri, 08 Jan 2010 11:13:00  Office Staff   S.O. News Service

ಕಾರವಾರ, ಜನವರಿ 8: ತೀವ್ರವಾಗಿ ಕೆಟ್ಟುಹೋಗಿರುವ ರಾಷ್ಟ್ರೀಯ ಹೆದ್ದಾರಿ ೧೭ ಶೀಘ್ರದಲ್ಲಿಯೇ ಚತುಷ್ಪಥವಾಗಲಿದೆ. ಕಾರವಾರ - ಕುಂದಾಪುರ ನಡುವಣ 193 ಕಿ.ಮೀ ದೂರದ ರಸ್ತೆಯನ್ನು ಚತುಷ್ಪಥವನ್ನಾಗಿಸಲು ಸರ್ಕಾರದ ಅನುಮೋದನೆ ದೊರಕಿದ್ದು ಈಗಾಗಲೇ ಟೆಂಡರ್ ಗಳನ್ನು ಅಂಗೀಕರಿಸಲಾಗಿದೆಎಂದು ತಿಳಿದುಬಂದಿದೆ.

ಈ ನಿಟ್ಟಿನಲ್ಲಿ ದೆಹಲಿಯ ರಸ್ತೆನಿರ್ಮಾಣ ಸಂಸ್ಥೆಯೊಂದಕ್ಕೆ ರಸ್ತೆ ಕಾಮಗಾರಿ ವಹಿಸಲಾಗಿದ್ದು ಸಂಸ್ಥೆ ಈಗಾಗಲೇ ಪ್ರಾಥಮಿಕ ಸರ್ವೇ ನಡೆಸಿದೆ. ಇನ್ನೂ ಸಾಮಾಜಿಕ ಹಾಗೂ ಪರ್ಯಾವರಣ ಸರ್ವೇಗಳು ಬಾಕಿ ಇದ್ದು ಶೀಘ್ರದಲ್ಲಿಯೇ ಸಂಪೂರ್ಣಗೊಳ್ಳಲಿದೆ. ಮಾರ್ಚ್ ತಿಂಗಳಿಂದ ಕಾಮಗಾರಿ ಪ್ರಾರಂಭವಾಗಿ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

 

ಚತುಷ್ಪಥವಾದ ಬಳಿಕ ಹೆದ್ದಾರಿಯ ಅಗಲ ಅರವತ್ತು ಅಡಿಯಾಗಲಿದ್ದು ಪಕ್ಕದ ಸಾರ್ವಜನಿಕ ಮತ್ತು ಅರಣ್ಯ ಪ್ರದೇಶಗಳನ್ನು ಒಳಗೊಳ್ಳಲಿದೆ. ಈ ನಿಟ್ಟಿನಲ್ಲಿ ಬಾಧಿತರಾಗುವ ಜನರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯಗಳ ಬಗ್ಗೆ ಇನ್ನೂ ಚರ್ಚೆಯಾಗಬೇಕಾಗಿದೆ. ಇಡಿಯ ಯೋಜನೆಯ ವೆಚ್ಚ ಪ್ರತಿ ಕಿ.ಮೀ.ಗೆ ಸುಮಾರು ಹನ್ನೊಂದರಿಂದ ಹದಿನೈದು ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ಸರ್ವೇ ಕಾರ್ಯದ ನಿಮಿತ್ತ ಸ್ಪಾನ್ ಕಂಸಲ್ಟೆಂಟ್ಸ್ ಸಂಸ್ಥೆಯ ಉಪನಿರ್ದೇಶಕ ಡಾ. ಗಗನ್ ಸಿ.ಪಾತ್ರಾ, ಪರ್ಯಾವರಣ ತಜ್ಞ  ಡಾ. ಎಸ್.ಎಸ್. ದೀಪಕ್ ಭಟ್ಕಳದಲ್ಲಿ ಮಂಗಳವಾರ ಉಪಸ್ಥಿತರಿದ್ದರು. 


Share: