ಮುಲ್ಕಿ, ಡಿಸೆಂಬರ್ ೧೬: ಮುಸ್ಲಿಂ ಸಮುದಾಯದಲ್ಲಿ ವರದಕ್ಷಿಣೆ ರಹಿತ ಮದುವೆಯೂ ಆದರ್ಶವೆನಿಸಿದ್ದು ಶೋಷಿತರ ಬಗ್ಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವ ಕೆಲಸ ಆಗಬೇಕಾದರೆ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಮೂಲ್ಕಿ ನಗರ ಪಂಚಾಯ್ತಿ ಅದ್ಯಕ್ಷ ಬಿ.ಎಂ.ಆಸಿಫ್ ಅಭಿಪ್ರಾಯ ಪಟ್ಟರು.
ಮೂಲ್ಕಿ ಬಳಿಯ ಕೆರೆಕಾಡುವಿನಲ್ಲಿ ಸಾದಾತ್ ವಲೀಯುಲ್ಲಹೀರವರ ದ್ಸಿಕ್‌ರ್‌ಸ್ವಲಾತ್‌ನಿಂದ ಸೋಮವಾರ ನಡೆದ ೫ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸೌಹಾರ್ದ ಸಂಗಮದಲ್ಲಿ ಮಾತನಾಡಿದರು.
ಮೂಲ್ಕಿ ವೃತ್ತ ನಿರೀಕ್ಷಕ ಶಿವಪ್ರಕಾಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಯುವಜನತೆಯು ತಪ್ಪು ದಾರಿಗೆ ಸಾಗಲು ಕಡಿವಾಣ ಹಾಕಬೇಕಾದರೆ ಅವರನ್ನು ಸಮಾಜ ಸೇವೆಯಲ್ಲಿ ಹಿರಿಯರು ತೊಡಗಿಸಿಕೊಂಡಾಗ ಸಮಾಜದ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು.
ಕೊಲ್ನಾಡು ಜುಮ್ಮಾ ಮಸೀದಿಯ ಇಸಾಕ್ ಫೈಝಿ ಅಧ್ಯಕ್ಷೆಯನ್ನು ವಹಿಸಿದ್ದರು.
ಮುಖ್ಯ ಭಾಷಣಕಾರರಾಗಿ ಪುತ್ತೂರು ಕಲ್ಲೇಗದ ಅಝೀಝ್ ದಾರಿಮಿ, ಮುನಿರ್ ಸಾಬ್ ಮಾಳೂರು. ಸಿರಾಜುದ್ದೀನ್ ಫೈಝಿ, ಮಾತನಾಡಿದರು.
ಜಿ.ಪಂ. ಸದಸ್ಯ ಪ್ರಮೋದ್‌ಕುಮಾರ್, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಮಹಮ್ಮದ್ ರಫೀಕ್ ಸುರತ್ಕಲ್, ಜಿಲ್ಲಾ ವಕ್ಫ್ ಬೋರ್ಡ್‌ನ ಸದಸ್ಯ ಕೆ.ಸಾವುಲ್ ಹಮೀದ್ ಕದಿಕೆ, ಕಿನ್ನಿಗೋಳಿ ಪಂಚಾಯ್ತಿಯ ಉಮಾವತಿ, ಅಬ್ದುಲ್ ರೆಹಮಾನ್, ಎಂ.ಕೆ.ಮಹಮ್ಮದ್ ಕೆರೆಕಾಡು, ಮಹಮ್ಮದ್ ಪಾಷಾ ತೀರ್ಥಹಳ್ಳಿ ಹಾಜರಿದ್ದರು.
ಮಡಿಕೇರಿಯ ಕಾಶಿಂ-ರಮ್‌ಲತ್‌ಬಾನು, ಮೂಡಬಿದ್ರಿಯ ಬದ್ರುದಿನ್-ದಿಲ್‌ಸಾದ್, ಮಣಿಪುರದ ಆಸಿಫ್-ಸಖೀನಾ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.