ಹುಬ್ಬಳ್ಳಿ, ಮಾ. ೫: ದಿನಪತ್ರಿಕೆಯೊಂದರ ಆಕ್ಷೇಪಾರ್ಹ ಲೇಖನ ಖಂಡಿಸಿ ಅಲ್ಪಸಂಖ್ಯಾಕ ಸಮು ದಾಯದವರು ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿ ಚದುರುತ್ತಿದ್ದಾಗ ಕಲ್ಲು ತೂರಾಟ ನಡೆದಿದ್ದ ರಿಂದ, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಶನಿವಾರ ಬೆಳಗ್ಗೆ ೭ ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದೆ.
ದಿನಪತ್ರಿಕೆಯಲ್ಲಿ ಆಕ್ಷೇಪಾರ್ಹ ಲೇಖನ ಪ್ರಕಟಿಸಿದ ಪತ್ರಿಕೆ ಹಾಗೂ ಲೇಖನದ ಮೂಲ ಲೇಖಕಿ ತಸ್ಲಿಮಾ ನಸ್ರೀನಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಂಜುಮನ್ ಸಂಸ್ಥೆ ನೇತೃತ್ವ ದಲ್ಲಿ ಮನವಿ ಸಲ್ಲಿಸಲೆಂದು ಸಾವಿರಾರು ಸಂಖ್ಯೆಯ ಅಲ್ಪಸಂಖ್ಯಾಕ ಸಮುದಾಯದವರು ಹಳೇ ಹುಬ್ಬಳ್ಳಿಯಲ್ಲಿ ಜಮಾಯಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ದರ್ಪಣ ಜೈನ್ ಅವರು ಮನವಿ ಸ್ವೀಕರಿಸಿದರಲ್ಲದೆ, ಇದೇ ಸಂದರ್ಭದಲ್ಲಿ ರಂಗಪಂಚಮಿ ಆಚರಣೆಯಲ್ಲಿ ಪ್ರಾರ್ಥನಾ ಸ್ಥಳದ ಗೋಡೆ ಬರಹ ಮಾಡಿದ್ದನ್ನು ಖಂಡಿಸಲಾಯಿತು.
ಮನವಿ ನೀಡಿ ಎಲ್ಲರೂ ಅಲ್ಲಿಂದ ಹೊರಡುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂ ದ ಹೆಸ್ಕಾಂಗೆ ಸೇರಿದ ಕಚೇರಿ, ಒಂದು ಟೆಂಪೊ ಜಖಂಗೊಂಡಿವೆ. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.
-ವದಂತಿ: ಕಲ್ಲು ತೂರಾಟ ಸುದ್ದಿ ಕಾಡ್ಗಿಚ್ಚಿನಂತೆ ನಗರದೆಲ್ಲಡೆ ಹಬ್ಬಿತಲ್ಲದೆ, ದಿಢೀರನೆ ಹೊಟೇ ಲ್, ಅಂಗಡಿ-ವ್ಯಾಪಾರ ಮಳಿಗೆಗಳು ಮುಚ್ಚಿದ್ದರಿಂದ ಹುಬ್ಬಳ್ಳಿಯಲ್ಲಿ ಅಘೋಷಿತ ಬಂದ್‌ನಂತೆ ಕಂಡಿತು.
ಸಿಬಿಟಿ, ದುರ್ಗದ ಬಯಲು, ದಾಜೀಬಾನಪೇಟೆ, ಕೊಪ್ಪಿಕರ ರಸ್ತೆ, ಚನ್ನಮ್ಮ ವೃತ್ತ, ಕಮರಿಪೇಟೆ ಇನ್ನಿತರ ಕಡೆಗಳಲ್ಲಿ ಕೆಲವೇ ನಿಮಿಷ ಗಳಲ್ಲಿ ಬಂದ್ ವಾತಾವರಣ ನಿರ್ಮಾಗೊಂಡಿತಲ್ಲದೆ, ಅಲ್ಲಲ್ಲಿ ಜನ ಗುಂಪು ಗುಂಪಾಗಿ ನಿಂತು ಮಾತ ನಾಡುತ್ತಿದ್ದುದು ಕಂಡು ಬಂದಿತು. ಕಾರವಾರ-ಕಲಘಟಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.
ಹತೋಟಿ: ನಗರದಲ್ಲಿ ಒಂದೆರಡು ಕಡೆ ಕಲ್ಲು ತೂರಾಟ ನಡೆದಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆ ೭ರಿಂದ ಶನಿವಾರ ಬೆಳಗ್ಗೆ ೭ ಗಂಟೆವರೆಗೆ ಕರ್ಫ್ಯೂ ವಿಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂ ನು-ಸುವ್ಯವಸ್ಥೆ) ಎ.ಆರ್. ಇನ್‌ಫೆಂಟ್ ಸುದ್ದಿಗಾರರಿಗೆ ತಿಳಿಸಿದರು.
ನಗರದಲ್ಲಿ ಪರಿಸ್ಥಿತಿ ಹತೋಟಿಯ ಲ್ಲಿದ್ದು, ಸೂಕ್ಷ್ಮ ಪ್ರದೇಶ ಸೇರಿದಂತೆ ಎಲ್ಲ ಕಡೆಗೂ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದರು.
ಕಲ್ಲು ತೂರಾಟದಿಂದ ಒಬ್ಬರಿಗೆ ಗಾಯವಾಗಿದ್ದು, ಹಳೇ ಹುಬ್ಬಳ್ಳಿ ಯಲ್ಲಿ ಉದ್ರಿಕ್ತ ಗುಂಪು ಚದು ರಿಸಲು ಲಾಠಿ ಪ್ರಹಾರ ಮಾಡಲಾಗಿದೆ. ನಗರಕ್ಕೆ ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗುತ್ತಿದೆ ಎಂದು ಡಿಸಿಪಿ ಚಾಂದಿರಾಮ್‌ಸಿಂಗ್ ತಿಳಿಸಿದರು.
ರಾತ್ರಿ ೮ ಗಂಟೆ ವೇಳೆಗೆ ಇಡೀ ನಗರವೇ ಮೌನಕ್ಕೆ ಜಾರಿದ ಸ್ಥಿತಿಗೆ ತಲು ಪಿತಲ್ಲದೆ, ಕೆಲವೊಂದು ವಾಹನಗಳ ಓಡಾಟ ಬಿಟ್ಟರೆ ಪ್ರಮುಖ ರಸ್ತೆಯ ಬಹುತೇಕ ವ್ಯಾಪಾರ - ವಹಿವಾಟ ಸ್ಥಗಿತಗೊಂಡಿ ತು.
ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೌಜನ್ಯ: ಉದಯವಾಣಿ