ಕುಂದಾಪುರ: ಕಟ್ಕೆರೆಯ ಕಾರ್ಮೆಲ್ ಆಶ್ರಮದ ಗ್ರೊಟ್ಟೊ ಧ್ವಂಸ ಮಾಡಿರುವುದು, ಕುಂದಾಪುರದಲ್ಲಿ ಕ್ರೈಸ್ತ ವಿದ್ಯಾರ್ಥಿಯೋರ್ವರ ಮೇಲೆ ಹಲ್ಲೆ ಹಾಗೂ ಇತರ ಘಟನೆಗಳ ಹಿನ್ನೆಲೆಯಲ್ಲಿ ಕುಂದಾಪುರ ಕೆಥೊಲಿಕ್ ಕ್ರೈಸ್ತ ಧರ್ಮ ವಲಯದ ಕೆಥೊಲಿಕರು ಗುರುವಾರ ಸಂಜೆ ಕುಂದಾಪುರ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯ ಮತ್ತು ರಕ್ಷಣೆಗಾಗಿ ಮನವಿ ಸಲ್ಲಿಸಿದರು. ಕುಂದಾಪುರ ಹೋಲಿ ರೋಸರಿ ಚರ್ಚ್‌ನ ಧರ್ಮಗುರು ರೆ. ಫಾ. ಅಲ್ಬನ್ ಡಿ’ಸೋಜ ಅವರು ನಿಯೋಗದ ನೇತೃತ್ವ ವಹಿಸಿದ್ದರು.
ಈ ಹಿಂದೆ ಕೂಡ ಕಾರ್ಮೆಲ್ ಆಶ್ರಮದ ಗ್ರೊಟ್ಟೊಗೆ ಹಾನಿ ಮಾಡಿರುವುದು, ಗಂಗೊಳ್ಳಿ ಚರ್ಚ್‌ನ ಲೂರ್ದ್ ಮಾತೆಯ ವಿಗ್ರಹ ಧ್ವಂಸ ಪ್ರಕರಣದ ಆರೋಪಿಗಳನ್ನು ಇದುವರೆಗೂ ಬಂಧಿಸದಿರುವುದು, ಕ್ರೈಸ್ತರ ಪ್ರಾರ್ಥನಾ ಸ್ಥಳಗಳಿಗೆ ಪದೇಪದೇ ದಾಳಿ ನಡೆಸುತ್ತಿರುವುದನ್ನು ಸಹ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ಪೊಲೀಸ್ ಇಲಾಖೆ ಹಾಗೂ ನಾಗರಿಕ ಆಡಳಿತಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಿ ಕ್ರೈಸ್ತ ಸಮುದಾಯದ ಜನರ ಮತ್ತು ಆಸ್ತಿ ಪಾಸ್ತಿಗಳ ರಕ್ಷಣೆಗೆ ಸರಕಾರವು ಮುಂದಾಗಬೇಕೆಂದು ವಿನಂತಿಸಲಾಯಿತು. ಉಪವಿಭಾಗಾಧಿಕಾರಿಗಳಾದ ಕೆ. ಎನ್. ರಮೇಶ್ ಕೆಥೊಲಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮದ ಭರವಸೆ ಇತ್ತು ಸಮಸ್ಯೆಗಳ ಸಂದರ್ಭದಲ್ಲಿ ತನ್ನ ಗಮನಕ್ಕೆ ನೇರವಾಗಿ ತರಬಹುದು ಎಂದು ತಿಳಿಸಿದರು.
ನಿಯೋಗದಲ್ಲಿ ಕುಂದಾಪುರ ವಲಯದ ವಿವಿಧ ಚರ್ಚ್‌ನ ಧರ್ಮಗುರುಗಳು, ಕುಂದಾಪುರ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡಾ. ಸೋನಿ ಡಿ’ಕೊಸ್ಟಾ, ಇತರ ಚರ್ಚ್‌ಗಳ ಪಾಲನಾ ಮಂಡಳಿಗಳ ಉಪಾಧ್ಯಕ್ಷರುಗಳು. ಕೆಥೊಲಿಕ್ ಮುಂದಾಳುಗಳಾದ ವಲೇರಿಯನ್ ಮಿನೆಜಸ್, ಫಿಲಿಪ್ ಡಿ’ಸಿಲ್ವ ಪಡುಕೋಣೆ, ಕರ್ನಾಟಕ ಕ್ರೈಸ್ತ ಒಕ್ಕೂಟದ ಜಾನ್ಸನ್ ಡಿ’ಸಿಲ್ವ, ಕೆಥೊಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಕ್ವಾಡ್ರಸ್, ಸ್ಟ್ಯಾನಿ ಡಿ’ಸಿಲ್ವ, ಆರ್ಚಿಬಾಲ್ಡ್ ಕ್ವಾಡ್ರಸ್, ವಿನೋದ್ ಕ್ರಾಸ್ತಾ, ಜೆರಾಲ್ಡ್ ಕ್ರಾಸ್ತಾ, ಸಹಮತದ ಶಶಿಧರ ಹೆಮ್ಮಾಡಿ ಮುಂತಾದವರು ಉಪಸ್ಥಿತರಿದ್ದರು.