ಬೈಂದೂರು, ಫೆಬ್ರವರಿ ೪: ದಿನಾಂಕ ೦೩/೦೨/೨೦೧೦ ರಂದು ೧೦:೦೦ ಗಂಟೆಗೆ ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ ಉಪ್ಪುಂದ ಜಂಕ್ಷನ್‌ನಲ್ಲಿರುವ ಶ್ರೀ ಲಕ್ಷ್ಮೀ ಮೊಬೈಲ್ ಪಾಯಿಂಟ್ ಎಂಬ ಅಂಗಡಿಯಲ್ಲಿ ಆರೋಪಿತರುಗಳಾದ ೧.ಅಬ್ದುಲ್ ಖಾಜಿ (೨೧ವರ್ಷ) ಬಿನ್ ಖಜಿ ಅನ್ವರ್, ವಾಸ: ರಾಮ ಮಂದಿರದ ಬಳಿ ಗಂಗೊಳ್ಳಿ ಕುಂದಾಪುರ ೨. ವಾಸುದೇವ ಅಚಾರಿ(೨೦ವರ್ಷ) ಬಿನ್ ಚೆನ್ನಯ್ಯ ಅಚಾರಿ, ವಾಸ: ಶಾಲೆ ಮಕ್ಕಿ ಬಿಜೂರು ಗ್ರಾಮ, ೩. ಸೌಮ್ಯ ದೇವಾಡಿಗ (೧೭ವರ್ಷ) ಬಿನ್ ಅಶೋಕ್ ದೇವಾಡಿಗ, ವಾಸ: ಕೊಟೆ ಬೆಟ್ಟು, ಬಿಜೂರು ಗ್ರಾಮ ೪. ಶ್ರೀಮತಿ ಲಕ್ಷ್ಮೀ (ಅಂಗಡಿಯ ಮಾಲಕಿ) ಎಂಬವರುಗಳು ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಪಡೆದು ತಮ್ಮ ಅಂಗಡಿಯ ಕಂಪ್ಯೂಟರ್‌ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಸಾರ್ವಜನಿಕರ ಮೊಬೈಲ್‌ಗೆ ಡೌನ್‌ಲೋಡ್ ಮಾಡಿ ಕೊಡುತ್ತಿರುವುದಾಗಿ ಬೈಂದೂರು ಪೊಲೀಸ್ ಉಪನೀರಿಕ್ಷರಾದ ಶ್ರೀ ಯೋಗೀಶ್ ಕುಮಾರ್ ರವರಿಗೆ ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ ಸೇರಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಅಂಗಡಿಯಲ್ಲಿ ಇದ್ದ ಕಂಪ್ಯೂಟರ್‌ಗಳನ್ನು ಪರಿಶೀಲಿಸಿದಾಗ ಕಂಪ್ಯೂಟರ್‌ಗಳಲ್ಲಿ ಆರೋಪಿತರುಗಳು ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿಟ್ಟಿರುವುದನ್ನು ಖಚಿತ ಪಡಿಸಿಕೊಂಡು ಇದಕ್ಕೆ ಸಂಬಂದ ಪಟ್ಟ ಸ್ವತ್ತುಗಳನ್ನು ಹಾಗೂ ನಗದು ರೂಪಾಯಿ ೨೦೦/-ನ್ನು ಸ್ವಾಧೀನಪಡಿಸಿಕೊಂಡು, ೩ ಜನ ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿದೆ.

ಆದರಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೭/೧೦ ಕಲಂ ೬೭(ಎ) ಮಾಹಿತಿ ತಂತ್ರಜ್ಞಾನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ