ಕಾರ್ಕಳ, ನವೆಂಬರ್ 13: ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ವಿಶ್ವ ತುಳು ಸಮ್ಮೇಳನದ ಅಂಗವಾಗಿ ಕಾರ್ಕಳ ವಲಯದ ತುಳು ಕ್ರೀಡೆಗಳ ಕ್ರೀಡಾಕೂಟವು ಇತ್ತೀಚೆಗೆ ಜರಗಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಐದು ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ ನೆರವೇರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೂಪಾ ಜೈನ್, ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಗೋರೆ, ಸುಂಕದಕಟ್ಟೆ ಕಾಲೇಜಿನ ಉಪನ್ಯಾಸಕ ಸುಧಾಕರ ಶೆಟ್ಟಿ, ವಲಯಾಧ್ಯಕ್ಷ ಕಮಲಾಕ್ಷ ನಾಯಕ್, ತ್ರಿವಿಕ್ರಮ ಕಿಣಿ, ಯುವಜನ ಕ್ರೀಡಾಧಿಕಾರಿ ಗಣಪಯ್ಯ, ದೈಹಿಕ ಶಿಕ್ಷಕ ಮಂಜುನಾಥ್, ವೃಷಭರಾಜ್ ಕಡಂಬ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶೆಟ್ಟಿ, ವಿಕ್ರಂ ಹೆಗ್ಡೆ ಉಪಸ್ಥಿತರಿದ್ದರು.
ಡಾ.ದಿನೇಶ್ಚಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಮಹಾವೀರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕುಕ್ಕುಂದೂರಿನ ಕಂಬಳದ ತೀರ್ಪುಗಾರ ಶಂಕರ ಮಡಿವಾಳ ಬಹುಮಾನ ವಿತರಿಸಿದರು. ಬೈಲೂರಿನ ನಿವೃತ್ತ ಶಿಕ್ಷಕ ಭೋಜ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳ ಒಕ್ಕೂಟಗಳ ವಲಯಾಧ್ಯಕ್ಷ ಧರ್ಮರಾಜ ಕುಮಾರ್ ಸ್ವಾಗತಿಸಿದರು. ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು