ಮಂಜೇಶ್ವರ, ಫೆಬ್ರವರಿ 4:ನೀರು ಪೋಲಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಿದ ಪತ್ರಕರ್ತನ ಮೇಲೆ ಹರಿಹಾಯ್ದು ಉದ್ದಟತನದ ಉತ್ತರ ನೀಡಿದ ಕುರಿತಂತೆ ಕೇರಳ ವಾಟರ್ ಆಥೋರಿಟಿ ಅಸಿಸ್ಟಂಟ್ ಇಂಜಿನೀಯರೊಬ್ಬರು ಕ್ಷಮೆಯಾಚಿಸಿದ ಬಗ್ಗೆ ಮಂಜೇಶ್ವರದಿಂದ ವರದಿಯಾಗಿದೆ.
ಇತ್ತೀಚೆಗೆ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಪೋಲಾಗುವುತ್ತಿರುವುದನ್ನು ಗಮನಿಸಿದ ಪತ್ರಕರ್ತರೂ ಕುಂಬಳೆ ಪ್ರಸ್ ಫಾರಂ ಉಪಾಧ್ಯಕ್ಷರೂ ಆದ ರಹಿಮಾನ್ ಉದ್ಯಾವರ್ ರವರು ಕೇರಳ ವಾಟರ್ ಆಥೋರಿಟಿ ಅಸಿಸ್ಟಂಟ್ ಇಂಜಿನಿಯರ್ ರವರ ಗಮನ ಸೆಳೆದು ಇದರ ಬಗ್ಗೆ ತಾವುಗಳು ನಿರ್ಲಕ್ಷ್ಯ ವಹಿಸಿದರೆ ಊರಿನ ಜನರನ್ನು ಒಟ್ಟು ಗೂಡಿಸಿ ಮುಷ್ಕರಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದಾಗ ಹಾಗಿದ್ದರೆ ಮೊದಲು ನಿಮ್ಮ ಮುಷ್ಕರ ಸತ್ಯಾಗ್ರಹ ಏನಿದ್ದರೂ ನಡೆಯಲಿ,ಅದಾದ ನಂತ್ರ ಏನು ಮಾಡಬೇಕೆಂದು ನಾನು ಯೋಚಿಸುತ್ತೇನೆಂಬ ಉದ್ದಟತನದ ಉತ್ತರವನ್ನು ನೀಡಿದ್ದರು.
ಪತ್ರಕರ್ತನಲ್ಲಿ ಉದ್ದಟತನದಿಂದ ಉತ್ತರ ನೀಡಿದ ವಾಟರ್ ಆಥೋರಿಟಿ ಅಸಿಸ್ಟಂಟ್ ಅಧಿಕಾರಿಯವರ ಅಸಭ್ಯ ವರ್ತನೆಯನ್ನು ಖಂಡಿಸಿದ ಗಡಿನಾಡ ಪತ್ರಕರ್ತರ ಒಕ್ಕೂಟವಾದ ಕುಂಬಳೆ ಪ್ರಸ್ ಫಾರಂ ಕೇರಳದ ಮುಖ್ಯ ಮಂತ್ರಿ,ನೀರಾವರಿ ಮಂತ್ರಿ ಹಾಗು ಸಂಭಂಧ ಪಟ್ಟ ಅಧಿಕಾರಿಗಳೀಗೆ ದೂರನ್ನು ರವಾನಿಸಿತ್ತು.ಇದಕ್ಕೆ ಸ್ಪಂಧಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ರವರು ಅಸಿಸ್ಟಂಟ್ ಇಂಜಿನಿಯರ್ ರವರನ್ನು ವಿಚಾರಾಣೆಗೆ ಗೊಳಪಡಿಸಿದಾಗ ಮಾನಸಿಕವಾದ ತೊಂದರೆಯಿಂದ ನನ್ನಿಂದ ಅರಿತೋ ಅರಿಯದೆಯೋ ತಪ್ಪಾಗಿ ಹೋಗಿದೆ ಮಾಡಿದ ತಪ್ಪಿಗಾಗಿ ನಾನು ಕ್ಷಮೆ ಯಾಚಿಸುತ್ತೇನೇಂದು ಹೇಳಿ ಕ್ಷಮೆಯಾಚಿಸಿರುವುದಾಗಿ ಮಾತ್ರವಲ್ಲದೆ ಇನ್ನು ಮುಂದಕ್ಕೆ ಯಾರಲ್ಲೂ ಇಂತಹ ಉತ್ತರವನ್ನು ನೀಡಬಾರದಾಗಿ ಅಸಿಸ್ಟಂಟ್ ಇಂಜಿನಿಯರ್‌ಗೆ ತಾಕೀತು ನೀಡಿರುವುದಾಗಿ ವಾಟರ್ ಅಥೋರಿಟಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಕುಂಬಳೆ ಪ್ರಸ್ ಫಾರಂ ಗೆ ಲಿಖಿತವಾಗಿ ತಿಳಿಸಿರುತ್ತಾರೆ.
-ಆರಿಫ್ ಮಚ್ಚಂಪಾಡಿ, ಮಂಜೇಶ್ವರ