ಕಾರವಾರ: ಶಿಕ್ಷಣ ಕ್ಷೇತ್ರದಲ್ಲಿ ಅಮುಲಾಗ್ರ ಬದಲಾವಣೆ ತರಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ ಸಿ ನಾಗೇಶ್ ಹೇಳಿದರು.
ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಲೋಕೋಪಯೋಗಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರುಭವನ, ಶಾಸಕರ ಮಾದರಿ ಶಾಲೆ, ಸರ್ಕಾರಿ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿವಿಧ ಗ್ರಾಮ ಪಂಚಾಯತಗಳಲ್ಲಿ 11 ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ ನೆರೆವೇರಿಸಿ ಮಾತನಾಡಿದ ಅವರು, ಸರ್ಕಾರ ಪ್ರತಿ ಹಂತದಲ್ಲೂ ಶಿಕ್ಷಣಕ್ಕೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ ಶಿಕ್ಷಣವು ಪರಾವಲಂಬಿಯಾಗದೆ ಸ್ವವಿಲಂಬನೆ ಯಾಗಬೇಕು ಎಂದರು.
ಶಿಕ್ಷಣವು ಸ್ವವಿಲಂಬಣೆಯನ್ನು ಬೆಳೆಸುತ್ತದೆ ಶಿಕ್ಷಣ ಮಾತ್ರ ಕ್ಷೇತ್ರ ಬೆಳದಂತೆ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಿ ಯುವಕರು ಸ್ಥಳೀಯವಾಗಿ ಉಳಿದುಕೊಳ್ಳುತ್ತಾರೆ. ಈಗೆಲ್ಲ ವಿದ್ಯಾರ್ಥಿಗಳಿಗೆ ಅವಿಭಕ್ತ ಕುಟುಂಬದ ಪರಿಚಯವಿಲ್ಲ ಇದು ಹೀಗಾಗಬಾರದು ಇದು ಕೂಡ ಶಿಕ್ಷಣದ ಒಂದು ಹಂತ ಮಕ್ಕಳ ಕಲಿಕೆಯನ್ನು ಪೋಷಕರು ನಿರ್ಧರಿಸಬಾರದು ಮಕ್ಕಳ ಮುಕ್ತ ಕಲಿಕೆಗೆ ಅವಕಾಶಮಾಡಿಕೊಡಬೇಕು ಪೋಷಕರು ತಮ್ಮ ಹಿತಾಸಕ್ತಿಗಾಗಿ ಮಕ್ಕಳಿಗೆ ಶಿಕ್ಷಣ ನೀಡದೆ ಅವರ ಬೆಳವಣಿಗೆ ಪ್ರಯತ್ನಿಸಬೇಕು ಎಂದರು.
ಶಿಕ್ಷಣ ಎಂದರು ಮಗುವಿನಲ್ಲಿರುವ ಕೌಶಲ್ಯವನ್ನು ಹೊರ ತೆಗೆಬೇಕು ಹೊರತು ಮಕ್ಕಳ ಮೇಲೆ ಹೇರಿಕೆಯಾಗಬಾರದು ಎಂದರು ಹಾಗುಯೇ ಈ ಸಮಾಜ ಸುಧಾರಣೆಯು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಇಂದು ನಾವು ನಮ್ಮ ಇಚ್ಚಿಗೆ ಅನುಗುಣವಾಗಿ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಆದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಇಚ್ಚಿಗೆ ಅನುಗುಣವಾಗಿ ಸಮಾಜ ನಿರ್ಮಾಣ ಮಾಡಲು ಶಿಕ್ಷಣದಲ್ಲಿ ಅಮುಲಾಗ್ರ ಬದಲಾವಣೆ ತಂದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದರು.
ಇಂದು ಸರ್ಕಾರವು ಕೂಡ ಸಾಕಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿದೆ 10 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, 15000 ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಹಂತದಲ್ಲಿದೆ. ಶಿಕ್ಷಕರ ಕೊರತೆ ಇರುವ ಸ್ಥಳದಲ್ಲಿ ಅಥಿತಿ ಶಿಕ್ಷಕರ ನೇಮಕಾತಿ, ಅಥಿತಿ ಶಿಕ್ಷಕರಿಗೆ ರೂ. 2000 ಗೌರವಧನ ಹೆಚ್ಚಳ, ಕೋವಿಡನಿಂದಾಗಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಕಾಲಿಕಾ ಚೇತನ ಕಾರ್ಯಕ್ರಮ ಹೀಗೆ ವಿವಿಧ ಕಾರ್ಯಗಳಿಂದ ಶಿಕ್ಷಣ ಕ್ಷೇತ್ರದಲ್ಲಿ. ಅಮುಲಾಗ್ರ ಬದಲಾವಣೆ ತರಲಾಗಿದೆ ಎಂದರು.
ಬಳಿಕ ವಿಧಾನ ಪರಿಷತ್ ಸದಸ್ಯ ಸಂಕ್ಕನೂರು ರವರು ಮಾತನಾಡಿ ದೇಶದ ಭದ್ರತೆ, ಅಭಿವೃದ್ಧಿಗೆ ಶಿಕ್ಷಣವು ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ ಆದ್ದರಿಂದ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು ಹಾಗೆಯೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಬಳಿಕ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ವಿಶೇಷ ಅಧ್ಯತೆ ನೀಡಲಾಗಿದೆ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದ್ದೆ ಈಗಾಗಲೇ ಗುರುಭವನ ನಿರ್ಮಾಣಕ್ಕೆ ಕ್ರಮ ವಹಿಸಿದ್ದು ಶಿಕ್ಷಕರು ತಮ್ಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಇದು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮಕ್ಕು ಮೊದಲು ರಾಷ್ಟ್ರೀಯ್ ಶಿಕ್ಷಣ ನೀತಿ 2020 ರ ಕುರಿತು ಶಿಕ್ಷಕ ನಾಗರಾಜ್ ಗೌಡ ಹಾಗೂ ಶುಭಾ ನಾಯ್ಕ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ನಿತೀನ್ ಪಿಕಳೆ, ನಗರ ಸಭೆ ಉಪಾಧ್ಯಕ್ಷ ಪಿ ಪಿ ನಾಯ್ಕ, ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, PU ಡಿಡಿಪಿಐ ಹಣಮಂತಪ್ಪ ನಿಟ್ಟೂರು, AEE ರಾಮಚಂದ್ರ ಗಂವ್ಕಾರ್, ಇನ್ನಿತರ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.