ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವೈದ್ಯರ ನಿರ್ಲಕ್ಷ್ಯ ಆರೋಪ. ಕಾರವಾರದಲ್ಲಿ ನವ ವಿವಾಹಿತೆ ಸಾವು.

ವೈದ್ಯರ ನಿರ್ಲಕ್ಷ್ಯ ಆರೋಪ. ಕಾರವಾರದಲ್ಲಿ ನವ ವಿವಾಹಿತೆ ಸಾವು.

Mon, 30 May 2022 04:06:27  Office Staff   SO News

ಕಾರವಾರ :  ಮದುವೆಯಾಗಿ 19 ದಿನಗಳಲ್ಲಿ ನವವಿವಾಹಿತೆಯೋರ್ವಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ  ನಗರದಲ್ಲಿ ನಡೆದಿದೆ.

 ಮೇ 10ರಂದು  ಕಿನ್ನರದ ಸನಾ ಮಾಂಜ್ರೇಕರ್  ಕಡವಾಡ ಗ್ರಾಮದ ನಿವಾಸಿ ಸ್ವಪ್ನಿಲ್ ಮಾಂಜ್ರೇಕರ್ ಎಂಬಾತನೊಂದಿಗೆ ವಿವಾಹವಾಗಿತ್ತು.  ಎಂಟು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ  ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಳು.  ಶನಿವಾರ ಮಧ್ಯಾಹ್ನ ಮತ್ತೆ ಜ್ವರ, ತಲೆನೋವು ಕಾಣಿಸಿಕೊಂಡಿದ್ದರಿಂದ  ನಗರದ ಕಾಜುಭಾಗ ದಲ್ಲಿರುವ ಖಾಸಗಿ ಆಸ್ಪತ್ರೆ ಸನಾಳನ್ನ ಮನೆಯವರು  ದಾಖಲಿಸಿದ್ದರು.  

ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿದ್ದರಿಂದ ಕೆಲವೇ ಹೊತ್ತಿನಲ್ಲಿ ಆಕೆಗೆ ಹೊಟ್ಟೆಉರಿ ಕಾಣಿಸಿಕೊಂಡಿದ್ದು ಉಸಿರಾಟದಲ್ಲೂ ಏರುಪೇರಾಗಿದೆ.  ತಕ್ಷಣ  ಪರಿಶೀಲಿಸಿದ ಆಸ್ಪತ್ರೆ ಸಿಬ್ಬಂದಿ ತಮ್ಮ ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಇಲ್ಲದ ಕಾರಣಕ್ಕೆ  ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ. ಅಂಬ್ಯುಲೆನ್ಸ್ ಮೂಲಕ ಸನಾಳನ್ನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದ್ರೆ  ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಿಸಿದರಾದರೂ ಪ್ರಯೋಜನವಾಗದೇ  ಸನಾ ಕೊನೆಯುಸಿರೆಳೆದಿದ್ದಾಳೆ.

ಈ ಬಗ್ಗೆ ಸಂಬಂಧಿಕರು ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಲ್ಲದೇ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


Share: