ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಧಾನಸಭಾ ಚುನಾವಣಾ ಸಿದ್ಧತೆ:ಭಟ್ಕಳ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ಯಾರಾ ಮಿಲಿಟರಿ,ಪೊಲೀಸ್ ಪಥಸಂಚಲನ

ವಿಧಾನಸಭಾ ಚುನಾವಣಾ ಸಿದ್ಧತೆ:ಭಟ್ಕಳ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ಯಾರಾ ಮಿಲಿಟರಿ,ಪೊಲೀಸ್ ಪಥಸಂಚಲನ

Sat, 08 Apr 2023 06:03:44  Office Staff   so news

ಭಟ್ಕಳ:ವಿಧಾನ ಸಭಾ ಚುನಾವಣೆಯು ಹತ್ತಿರವಾಗುತ್ತಿದ್ದಂತೆಯೇ ಸೂಕ್ಷö್ಮ ಪ್ರದೇಶವೆನ್ನುವ ಹಣೆ ಪಟ್ಟಿ ಕಟ್ಟಿಕೊಂಡುವ ಭಟ್ಕಳ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ಯಾರಾ ಮಿಲಿಟರಿ ಹಾಗೂ
ಪೊಲೀಸ್ ಸಿ.ಆರ್.ಪಿ.ಎಫ್. ತುಕಡಿ ಪಥ ಸಂಚಲನವನ್ನು ನಡೆಸುವ ಮೂಲಕ ಜನರಲ್ಲಿ ಶಾಂತಿಯುತ ಚುನಾವಣೆಯನ್ನು ನಡೆಸುವ ಕುರಿತು ಭರವಸೆ ಮೂಡಿಸುವಲ್ಲಿ ಯಶಸ್ವೀಯಾದವು. 
ನಗರದಿಂದ ಹೊರಟ ಪಥ ಸಂಚಲನವು ಭಟ್ಕಳ ನಗರ ಸೇರಿದಂತೆ ರಾಷ್ಟಿಯ ಹೆದ್ದಾರಿಯಾಗಿ ಹೆಬಳೆ, ತೆಂಗಿನಗುಡಿ, ವೆಂಕಟಾಪುರ, ಶಿರಾಲಿಯಾದಿಯಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ್ದು ಸಾವಿರಾರು ಜನರು ಪಥ ಸಂಚಲನವನ್ನು ವೀಕ್ಷಿಸಿದರು. ಒಮ್ಮೆ ಅವಾಕ್ಕಾದ ಜನರು ನಂತರ ಇದು ಚುನಾವಣಾ ಪೂರ್ವ ತಯಾರಿ ಎಂದು ತಿಳಿಯುತ್ತಲೇ ಸಮಾಧಾನದ ನಿಟ್ಟುಸಿರು ಬಿಟ್ಟರು. 
ಅತ್ಯಂತ ಶಿಸ್ತು ಬದ್ಧವಾಗಿ ನಡೆದ ಪಥ ಸಂಚಲನದಲ್ಲಿ ಭಟ್ಕಳ ಉಪ ವಿಭಾಗದ ಉಪಾಧೀಕ್ಷಕ ಶ್ರೀಕಾಂತ ಕೆ., ಇನ್ಸಪೆಕ್ಟರ್ ಚಂದನ ಗೋಪಾಲ, ಸಬ್ ಇನ್ಸಪೆಕ್ಟರಗಳಾದ ಶ್ರೀಧರ ನಾಯ್ಕ,ಹಾಗೂ ಮಯೂರ ಸೇರಿದಂತೆ ನಗರ ಠಾಣೆ ಗ್ರಾಮೀಣ ಠಾಣೆ, ಮುರ್ಡೇಶ್ವರ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದಿದ್ದ ಸಿಬ್ಬಂದಿಗಳು, ಮೀಸಲು ಪಡೆಯ ಸಿಬ್ಬಂದಿಗಳು  ಉಪಸ್ಥಿತರಿದ್ದರು.


Share: