ಹೊಸಪೇಟೆ : ವಿಜಯನಗರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ಸರಳವಾಗಿ ಆಚರಿಸಲಾಯಿತು.
ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು ಅವರು ಪುಷ್ಪ ನಮನ ಸಲ್ಲಿಸಿ ಡಾ.ರಾಜ್ ಕುಮಾರ್ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾಡಳಿತದ ವತಿಯಿಂದ ಪ್ರಥಮ ಬಾರಿಗೆ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಗುರುಬಸವರಾಜ, ಗ್ರೇಡ್-2 ತಹಶೀಲ್ದಾರರಾದ ಮೇಘಾ, ಮರಿಯಮ್ಮನಹಳ್ಳಿಯ ಕಂದಾಯ ನಿರೀಕ್ಷಕರರಾದ ಅಂದಾನಿಗೌಡ, ವಾರ್ತಾ ಇಲಾಖೆಯ ಪ್ರ.ದ.ಸ.ರಾದ ಕೆ.ರಾಮಾಂಜನೇಯ, ವಾಹನ ಚಾಲಕ ಪಿ.ಕೃಷ್ಣ ಸ್ವಾಮಿ, ಲೋಕೇಶ, ತಾಯೇಶ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಇದ್ದರು.